ನನಗೆ ಮಹಿಳೆಯರ ಮೇಲೆ ಅಪಾರ ಗೌರವವಿದೆ: ನೋವಾಗಿದ್ದರೆ ಕ್ಷಮಿಸಿ ಎಂದ ವಿ. ಸೋಮಣ್ಣ

ಮಹಿಳೆಗೆ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ವಿ‌‌. ಸೋಮಣ್ಣ ಕ್ಷಮೆಯಾಚನೆ ಮಾಡಿದ್ದಾರೆ. ರೈತರು ಹಾಗೂ ಸಾರ್ವಜನಿಕರ ಆಕ್ರೋಶದ ಬಳಿಕ ಎಚ್ಚೆತ್ತ ಸೋಮಣ್ಣ, ಕ್ಷಮೆ ಕೇಳಿದ್ದಾರೆ. 

First Published Oct 23, 2022, 5:06 PM IST | Last Updated Oct 23, 2022, 5:06 PM IST

45 ವರ್ಷಗಳ ಕಾಲ ಹಲವು ಏಳು-ಬೀಳುಗಳನ್ನು ಕಂಡಿದ್ದೇನೆ, ನಿನ್ನೆ ಕಾರ್ಯಕ್ರಮದಲ್ಲಿ ಸಣ್ಣ ಅಪಚಾರವನ್ನು ಮಾಡಿಲ್ಲ. ಪ್ರಾಯಶಃ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ನಿನ್ನೆ ನಡೆದ ಘಟನೆ ಘಟನೆಯೇ ಅಲ್ಲ ಎಂದ ಸಚಿವ ಸೋಮಣ್ಣ, ನಿನ್ನೆ ಆ ಹೆಣ್ಣು ಮಗಳು ಪದೇ ಪದೇ ವೇದಿಕೆ ಮೇಲೆ ಬರುತ್ತಿದ್ದಳು ಎಂದರು. ಮಹಿಳೆಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ, ನನಗೆ ಹೆಣ್ಣು ಮಕ್ಕಳ ಬಗ್ಗೆ ಅಪಾರವಾದ ಗೌರವವಿದೆ‌. ನಾನೂ ಕೂಡಾ ಬಡತನದಿಂದಲೇ ಬಂದವನು, ಆ ಹೆಣ್ಣು ಮಗಳಿಗೂ ಸಹ ಹಕ್ಕು ಪತ್ರ ಕೊಡಿಸಿದ್ದೇನೆ ಎಂದರು.

'ಡಾಲಿ ಕೀ ಡೋಲಿ' ಸಿನಿಮಾ ಸ್ಟೈಲಲ್ಲಿ ದರೋಡೆ: ಹಣ ಚಿನ್ನಾಭರಣ ದೋಚಿ ವಧು ಎಸ್ಕೇಪ್