ಲಾಕ್‌ಡೌನ್ ಮತ್ತಷ್ಟು ಸಡಿಲ: ಜಿಮ್ ಓಪನ್ ಮಾಡಲು ಡೇಟ್ ಫಿಕ್ಸ್
ಜಿಮ್ ಓಪನ್ ಬಗ್ಗೆ ಬಗ್ಗೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಮೇ 17ರ ಬಳಿಕ ಜಿಮ್ ಹಾಗೂ ಫಿಟ್ನೆಸ್ ಸೆಂಟರ್ ಆರಂಭಿಸಲು ಮುಕ್ತ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ರವಿ ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಮೇ.13):ಲಾಕ್‌ಡೌನ್‌ನಿಂದಾಗಿ ದೇಹ ದಂಡಿಸುವವರ ಪಾಲಿಗೆ ಬ್ರೇಕ್ ಬಿದ್ದಂತೆ ಆಗಿತ್ತು. ಯಾವಾಗ ಜಿಮ್ ಓಪನ್ ಆಗುತ್ತೆ ಎನ್ನುವವರಿಗೆ ಸಚಿವ ಸಿ.ಟಿ. ರವಿ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಜಿಮ್ ಓಪನ್ ಯಾವಾಗ ಎನ್ನುವ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಮೇ.17ರ ನಂತರ ಜಿಮ್ ಹಾಗೂ ಗಾಲ್ಫ್ ಕ್ಲಬ್ ತೆರೆಯಲು ಅವಕಾಶ ನೀಡಲಾಗುವುದು ಎಂದು ಕ್ರೀಡಾ ಹಾಗೂ ಯುವಜನ ಖಾತೆ ಸಚಿವೆ ಸಿ.ಟಿ. ರವಿ ಹೇಳಿದ್ದಾರೆ.
ಒಂದೇ ಕಟ್ಟಡದಲ್ಲಿ ವಾಸವಿದ್ದ 11 ಮಂದಿಗೆ ಕೊರೋನಾ ಶಾಕ್..!
ಈ ವಿಚಾರದ ಬಗ್ಗೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಮೇ 17ರ ಬಳಿಕ ಜಿಮ್ ಹಾಗೂ ಫಿಟ್ನೆಸ್ ಸೆಂಟರ್ ಆರಂಭಿಸಲು ಮುಕ್ತ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ರವಿ ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.