ನನ್ನ ಗಂಡ ನಿವೃತ್ತ ಸೈನಿಕ, ಮಗ ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ: ಉಗ್ರ ಮತೀನ್ ತಾಯಿ ಕಣ್ಣೀರು

ನನ್ನ ಮಗ ತಪ್ಪು ಮಾಡಿದ್ದರೆ ಶಿಕ್ಷೆ ನೀಡಲಿ, ಆತನ ತಂದೆ ನಿವೃತ್ತ ಸೈನಿಕ ಎಂದು ಮಗನ ಬಗ್ಗೆ ತಿಳಿದು ಶಂಕಿತ ಉಗ್ರ ಮತೀನ್ ತಾಯಿ ಕಣ್ಣೀರು ಹಾಕಿದ್ದಾರೆ.

First Published Nov 22, 2022, 3:48 PM IST | Last Updated Nov 22, 2022, 3:48 PM IST

ಮಂಗಳೂರು ಸ್ಫೋಟ ಪ್ರಕರಣದಲ್ಲಿ ಶಂಕಿತ ಉಗ್ರ ಮತೀನ್ ಹೆಸರು ಕೂಡ ಕೇಳಿಬರುತ್ತಿದ್ದು, ಮಗನ ಕಹಾನಿ ಕೇಳಿ ಕುಟುಂಬ ಬೆಚ್ಚಿ ಬಿದ್ದಿದೆ. ಮಗ ಮತೀನ್‌ ಭಯೋತ್ಪಾದಕ ಕೃತ್ಯಕ್ಕೆ ತಾಯಿ ಕಂಗಾಲಾಗಿದ್ದು, ನನ್ನ ಮಗ ಕಳೆದ ಮೂರು ವರ್ಷದಿಂದ ನಾಪತ್ತೆಯಾಗಿದ್ದಾನೆ ಎಂದು ಕಣ್ಣೀರು ಹಾಕಿದ್ದಾರೆ. ಅವರಿಗೆ ಈ ಆಘಾತದಿಂದ ಇನ್ನು ಚೇತರಿಕೊಳ್ಳಲು ಆಗುತ್ತಿಲ್ಲ. ಮತೀನ್ ಏಕೆ ಹೀಗೆ ಮಾಡಿದ ಎಂಬುದು ನನಗೆ ಗೊತ್ತಿಲ್ಲ. ಯಾವತ್ತು ಈ ರೀತಿ ಪರಿಸ್ಥಿತಿ ಬರುತ್ತೆ ಎಂದು ಅಂದುಕೊಂಡಿರಲಿಲ್ಲ ಎಂದರು. ಬೆಂಗಳೂರಿನಲ್ಲಿ ಇಂಜಿನಿಯರಿಂಗ್‌ ಓದುತ್ತಿದ್ದ, ಮೋಸ್ಟ್ ವಾಂಟೆಡ್‌ ಶಂಕಿತ ಉಗ್ರ  ಮತೀನ್‌  ನಾಪತ್ತೆಯಾಗಿದ್ದು,   ಮತೀನ್ ತಂದೆ  26 ವರ್ಷಗಳ ಕಾಲ ದೇಶಕ್ಕಾಗಿ ಸೇನೆಯಲ್ಲಿ ಕಾರ್ಯ ನಿರ್ವಹಿಸಿದವರು. 2019ರಲ್ಲೇ   ಉಗ್ರ ಮತೀನ್ ನಾಪತ್ತೆಯಾಗಿದ್ದ.

ಹೆರಿಗೆ ಆಸ್ಪತ್ರೆ ಮುಂದೆಯೇ ರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ
 

Video Top Stories