Asianet Suvarna News Asianet Suvarna News

ಹೆಂಡ್ತಿ ನೋಡಲು ಬೈಕ್‌ನಲ್ಲೇ ಮುಂಬೈನಿಂದ ಬಂದ ಭೂಪ: ಜಿಲ್ಲಾಡಳಿತದ ಕಣ್ಣು ತಪ್ಪಿಸಿ ಬಂದವನಿಗೆ ಕೊರೋನಾ

ಹೆಂಡತಿ ನೋಡಲು ಬೈಕ್‌ನಲ್ಲಿ ಮುಂಬೈನಿಂದ ಬಂದ ವ್ಯಕ್ತಿಗೆ ಅಂಟಿದ ಕೊರೋನಾ ವೈರಸ್| ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಗ್ರಾಮದಲ್ಲಿ ನಡೆದ ಘಟನೆ| 

First Published May 20, 2020, 3:08 PM IST | Last Updated May 20, 2020, 3:15 PM IST

ವಿಜಯಪುರ(ಮೇ.20): ಹೆಂಡತಿಯನ್ನ ನೋಡಲು ಬೈಕ್‌ನಲ್ಲಿ ಮುಂಬೈನಿಂದ ಬಂದ ವ್ಯಕ್ತಿಗೆ ಕೊರೋನಾ ವೈರಸ್‌ ತಗುಲಿದ ಘಟನ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಗ್ರಾಮದಲ್ಲಿ ನಡೆದಿದೆ. ಮೇ. 17 ರಂದು ಮುಂಬೈನಿಂದ ಬೈಕ್‌ನಲ್ಲಿ ಈ ಇಂಚಗೇರಿ ಗ್ರಾಮಕ್ಕೆ ಆಗಮಿಸುತ್ತಿದ್ದನು.

ಗೌಡರ ತವರಲ್ಲಿ ಕೊರೋನಾ ಸ್ಫೋಟ; ರಾಜ್ಯದಲ್ಲಿಂದು 63 ಪಾಸಿಟೀವ್ ಕೇಸ್‌ಗಳು

ದಾರಿ ಮಧ್ಯೆ ಅಧಿಕಾರಿಗಳು ಈತನನ್ನ ಹಿಡಿದು ಕ್ವಾರಂಟೈನ್‌ ಕೇಂದ್ರಕ್ಕೆ ಹಾಕಿದ್ದರು. ಈತನ ಗಂಟಲು ದ್ರವ, ರಕ್ತದ ಮಾದರಿನ್ನ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಪಾಸಿಟಿವ್‌ ಅಂತ ವರದಿ ಬಂದಿದೆ. ಜಿಲ್ಲಾಡಳಿತದ ಕಣ್ಣು ತಪ್ಪಿಸಿ ಬಂದ ವ್ಯಕ್ತಿಗೆ ಮಹಾಮಾರಿ ಕೊರೋನಾ ಸೋಂಕು ತಗುಲಿದೆ. 

Video Top Stories