Kodagu Flood Relief: 3 ವರ್ಷವಾದ್ರೂ ಮುಗಿಯದ ಕಾಮಗಾರಿ, ಸೂರಿಗಾಗಿ ಕಾಯುತ್ತಿದ್ದಾರೆ ಸಂತ್ರಸ್ತರು
- 2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಮನೆ ಕಳಕೊಂಡ ನೂರಾರು ಜನ
- 600ಕ್ಕೂ ಅಧಿಕ ಕುಟುಂಬಗಳಿಗೆ ಮನೆ ಸಿಕ್ಕಿದ್ದರೆ ,ಇನ್ನೂ ಪೂರ್ಣವಾಗದ ಹಲವು ಮನೆಗಳು
- ಕೂಲಿ ಕೆಲಸ ಮಾಡಿ ಬಾಡಿಗೆ ಮನೆಯಲ್ಲಿ ವಾಸ, ಬಾಡಿಗೆ ಕಟ್ಟಲು ಆಗದೇ ಪರದಾಟ
ಕೊಡಗು (ಡಿ. 03): 2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ (Nature calamities) ಮನೆ ಕಳೆದುಕೊಂಡವರಿಗೆ ಸರ್ಕಾರದ ವತಿಯಿಂದ ಪುನರ್ವಸತಿ ಕಲ್ಪಿಸಿಕೊಡಲಾಗುತ್ತಿದೆ. ಹಲವಾರು ಮನೆಗಳು ಇನ್ನೂ ಕೂಡಾ ಪೂರ್ಣವಾಗಿಲ್ಲ. ಅತ್ತ ಬಾಡಿಗೆ ಕಟ್ಟುವ ಸ್ಥಿತಿಯಲ್ಲೂ ಇಲ್ಲ, ಇತ್ತ ಮನೆಯೂ ಇಲ್ಲ... ಪರಿಣಾಮ ಸಂತ್ರಸ್ತರು (Flood Victims) ಇಂದಿಗೂ ಸರ್ಕಾರದ ಮನೆಗಾಗಿ ಕಾಯುತ್ತಿದ್ದಾರೆ.
Kodagu: ಹೆಸರಿಗಷ್ಟೇ 'ಕೂರ್ಗ್ ವಿಲೇಜ್', ಸಾರ್ವಜನಿಕರಿಗೆ ಉಪಯೋಗವಾಗುತ್ತಿಲ್ಲ!
ಜಿಲ್ಲೆಯಲ್ಲಿ ಮಾದಾಪುರ, ಕೆ.ನಿಡುಗಣೆ, ಬಿಳಿಗೇರಿ ಗ್ರಾಮದಲ್ಲಿ ಈಗಾಗಲೇ 600ಕ್ಕೂ ಅಧಿಕ ಮನೆಗಳನ್ನು ಹಸ್ತಾಂತರ ಮಾಡಲಾಗಿದೆ. ಆದ್ರೆ ಮಡಿಕೇರಿ (Madikeri) ಹೊರವಲಯದ RTO ಕಚೇರಿ ಬಳಿ 76 ಮನೆಗಳು ಇನ್ನೂ ಕೂಡಾ ಪೂರ್ಣವಾಗಿಲ್ಲ. ಕೆ. ನಿಡುಗಣೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಡಾ ಹಲವರು ಮನೆ, ಜಮೀನು ಕಳೆದುಕೊಂಡಿದ್ದು, ಕೆಲವರು ಅಪಾಯಕಾರಿ ಪ್ರದೇಶದಲ್ಲಿ ವಾಸವಿದ್ದಾರೆ. ಅವರಿಗಾಗಿ ಈ ಇಲ್ಲಿನ ಮನೆಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಆದ್ರೆ ವಿಳಂಬ ಧೋರಣೆಯಿಂದಾಗಿ ಜನರ ಕನಸು ಕನಸಾಗಿಯೇ ಉಳಿದಿದೆ. ಈ ವಿಳಂಬ ಧೋರಣೆ ಬಗ್ಗೆ ಸಂತ್ರಸ್ತರು ಕೂಡಾ ಅಸಮಾಧಾನ ಹೊರಹಾಕುತ್ತಿದ್ದಾರೆ.
3 ವರ್ಷ ಕಳೆದಿದೆ. ಸರ್ಕಾರ ಪರಿಹಾರವಾಗಿ ನೀಡುವ ಮನೆಗಾಗಿ ಇನ್ನೂ ಎಷ್ಟು ವರ್ಷ ಕಾಯಬೇಕು ಅನ್ನೋದು ಸಂತ್ರಸ್ತರ ಪ್ರಶ್ನೆ. ಈಗಿರುವ ಸರ್ಕಾರ, ಜಿಲ್ಲಾಡಳಿತ ಇನ್ನಾದ್ರೂ ಇವರತ್ತ ಕಾಳಜಿ ತೋರಬೇಕಾಗಿದೆ.