ಅಮ್ಮನ ನೆನಪುಗಳು...ಮೊಬೈಲ್ ಸಿಕ್ತು..ಬಾಲಕಿಯ ಮುಖದಲ್ಲಿ ನಗು ಮೂಡಿತು!
* ಬಾಲಕಿಯ ಕೈಸೇರಿದ ನೆನಪಿನ ಬುತ್ತಿ!
* ಕೊರೋನಾದಿಂದ ಮೃತಪಟ್ಟ ಅಮ್ಮನ ಮೊಬೈಲ್ ಕಳ್ಳತನವಾಗಿತ್ತು
* ಮೊಬೈಲ್ ಹುಡುಕಿ ಕೊಡುವಂತೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಪತ್ರ ಬರೆದಿದ್ದ ಮಗಳು ಹೃತೀಕ್ಷಾ|
* ಮಡಿಕೇರಿ ಆಸ್ಪತ್ರೆ ಗೋಡೌನ್‌ನಲ್ಲಿ ಸಿಕ್ಕಿದ ದಿವಂಗತ ಪ್ರಭಾ ಬಳಸುತ್ತಿದ್ದ ಮೊಬೈಲ್
ಕೊಡಗು(ಆ.20) ಕೊನೆಗೂ ಬಾಲಕಿಯ ಕಣ್ಣಲ್ಲಿ ಸಾಂತ್ವನದ ಭಾವ ಮೂಡಿದೆ. ಅಮ್ಮನ ನೆನಪುಗಳುಳ್ಳ ಮೊಬೈಲ್ ಸಿಕ್ಕಿದೆ,. ಆಸ್ಪತ್ರೆಯಿಂದ ಕಾಣೆಯಾಗಿದ್ದ ಮೊಬೈಲ್ ಪತ್ತೆಯಾಗಿದೆ. ಕಳೆದ ಮೇನಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ತಾಯಿ ಪ್ರಭಾ ಮೃತಪಟ್ಟಿದ್ದರು. ಆಸ್ಪತ್ರೆಯಿಂದ ಕಾಣೆಯಾಗಿದ್ದ ಮೊಬೈಲ್ ಹುಡುಕಿ ಕೊಡುವಂತೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮಗಳು ಹೃತೀಕ್ಷಾ ಪತ್ರ ಬರೆದಿದ್ದಳು .ಅಮ್ಮನ ಫೋಟೋ, ನೆನಪುಗಳು ಮೊಬೈಲ್‌ನಲ್ಲಿದೆ, ದಯವಿಟ್ಟು ನನಗೆ ಮರಳಿಸಿ ಅಂತ ಮನವಿ ಮಾಡಿಕೊಂಡಿದ್ದರು.
ಸೆಕೆಂಡ್ ಡೋಸ್ ಪಡೆದವರಿಗೂ ಬಿಡದ ಕೊರೋನಾ ಕಾಟ
ಪುಟಾಣಿಯ ಮೊರೆಗೆ ಮರುಗಿದ್ದ ಜನರು ಸೋಶಿಯಲ್ ಮೀಡಿಯಾ ಮೂಲಕ ನ್ಯಾಯಕ್ಕೆ ಆಗ್ರಹಿಸಿದ್ದರು. ಎಷ್ಟೇ ಹುಡುಕಿದರೂ ಮೊಬೈಲ್ ಸಿಕ್ಕಿರಲಿಲ್ಲ, ಈಗ ಮೂರು ತಿಂಗಳ ಬಳಿಕ ಮೊಬೈಲ್ ಪತ್ತೆಯಾಗಿದೆ. ಮಡಿಕೇರಿ ಆಸ್ಪತ್ರೆ ಗೋಡೌನ್‌ನಲ್ಲಿ ಮೊಬೈಲ್ ಸಿಕ್ಕಿದ್ದು ಮಗಳಿಗೆ ತಲುಪಿಸಲಾಗಿದೆ.