ಏಷ್ಯಾನೆಟ್ ಸುವರ್ಣ ನ್ಯೂಸ್‌ ವರದಿಯಿಂದ ಎಚ್ಚೆತ್ತ ಸರ್ಕಾರ: ಕಾರವಾರ ಟನಲ್‌ ಬಂದ್‌

ಐಆರ್‌ಬಿ ಅವೈಜ್ಞಾನಿಕ ಕಾಮಗಾರಿಯಿಂದ ಕೃತಕ ನೆರೆ ಸೃಷ್ಠಿಯಾಗ್ತಿದೆ.ಇದಕ್ಕೆ ಫಿಟ್‌ನೆಸ್‌ ಸರ್ಟಿಫಿಕೇಟ್‌ ಸಿಗುವವರೆಗೆ ಬಂದ್‌ ಮಾಡುವಂತೆ ಸಚಿವ ಮಂಕಾಳು ವೈದ್ಯ ಸೂಚನೆ ನೀಡಿದ್ದಾರೆ.

First Published Jul 9, 2023, 10:58 AM IST | Last Updated Jul 9, 2023, 10:58 AM IST

ಉತ್ತರ ಕನ್ನಡ: ಮಳೆಯಿಂದ ಕಾರವಾರದಲ್ಲಿ(Karwar) ಟನಲ್‌ ಒಳಗೆ ನೀರು ಸುರಿಯುತ್ತಿತ್ತು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟನಲ್(Tunnel) ನಿರ್ಮಿಸಲಾಗಿದೆ. ಈ ಟನಲ್‌ ಓಪನ್‌ ಆಗಿ ಕೇವಲ ಒಂದು ವರ್ಷವಾಗಿದ್ದು, ಅಷ್ಟರಲ್ಲೇ ಸೋರಿಕೆಯಾಗುತ್ತಿದೆ. ಇದರ ಒಳಭಾಗ ಕುಸಿಯುವ ಭೀತಿ ಸಹ ಇದೆ. ಈ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ. ಟನಲ್‌ ಬಂದ್ ಮಾಡುವಂತೆ ಸಚಿವ ಮಂಕಾಳ್‌ ವೈದ್ಯ(Mankala Vaidya) ಸೂಚನೆ ನೀಡಿದ್ದಾರೆ. ಐಆರ್‌ಬಿ ಅವೈಜ್ಞಾನಿಕ ಕಾಮಗಾರಿಯಿಂದ ಕೃತಕ ನೆರೆ ಸೃಷ್ಠಿಯಾಗ್ತಿದೆ. ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ 66 ರ  ಕಾಮಗಾರಿಯಿಂದ ಸಾಕಷ್ಟು ಜನರಿಗೆ ತೊಂದರೆಯಾಗ್ತಿದೆ. ಕೃತಕ ನೆರೆಗೆ ನೇರ ಕಾರಣ ಐಆರ್‌ಬಿ ಎಂದು ಸಚಿವ ಮಂಕಾಳು ವೈದ್ಯ ಗರಂ ಆಗಿದ್ದಾರೆ.

ಇದನ್ನೂ ವೀಕ್ಷಿಸಿ:  ಮದ್ಯದ ದರ ಹೆಚ್ಚಳ ಬೇಡ, ಮಾಡಿದ್ರೆ ಉಗ್ರ ಹೋರಾಟ ಮಾಡುತ್ತೇವೆ: ವೆಂಕಟೇಶ್‌ ಗೌಡ