Asianet Suvarna News Asianet Suvarna News

ಧಾರವಾಡ ಎಮ್ಮೆಗೆ ಸಿಕ್ತು ರಾಷ್ಟ್ರೀಯ ಮಾನ್ಯತೆ..!

Sep 15, 2021, 12:27 PM IST

ಧಾರವಾಡ(ಸೆ.15):  ಕೃತಕ ಗರ್ಭಧಾರಣೆ ಭಾರತಕ್ಕೆ ಕಾಲಿಟ್ಟು 60 ವರ್ಷಗಳ ನಂತರವೂ ತಳಿ ಶುದ್ಧತೆ ಕಾಪಾಡಿಕೊಂಡಿರುವ ‘ಧಾರವಾಡಿ ಎಮ್ಮೆ’ ತಳಿಗೆ ಕೊನೆಗೂ ರಾಷ್ಟ್ರೀಯ ಮಾನ್ಯತೆ ದೊರೆತಿದೆ. ಹೌದು, ಧಾರವಾಡದಲ್ಲಿ ಓಡಾಡೋ ಬಿಡಾಡಿ ಎಮ್ಮೆಗಳಿಗೆ ಈಗ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಶೆ ಸಿಕ್ಕಿದೆ. ಈ ಕುರಿತು ಒಂದು ಕಂಪ್ಲೀಟ್ ವರದಿ ಇಲ್ಲಿದೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಪಶು ಸಂಗೋಪನೆ ವಿಭಾಗವು ಇತ್ತೀಚಿಗೆ ನಡೆಸಿದ ಸಭೆಯಲ್ಲಿ ರಾಜ್ಯದ ‘ಧಾರವಾಡಿ ತಳಿ’ ಎಮ್ಮೆಗೆ ‘ಇಂಡಿಯಾಬಫೆಲೊ_0800 ಧಾರವಾಡಿ_01018’ ಎಂದು ತಳಿ ಪ್ರವೇಶ ಸಂಖ್ಯೆ ನೀಡಿದೆ. ಈ ಮೂಲಕ ಎಮ್ಮೆಗಳಲ್ಲಿ ಮಾನ್ಯತೆ ಪಡೆದ ರಾಜ್ಯದ ಮೊದಲ ತಳಿ ಇದಾಗಿದೆ.

ಬಿಎಂಟಿಸಿ ಪ್ರಯಾಣಿಕರಿಗೆ ಕಹಿಸುದ್ದಿ, ದಶಕಗಳ ವೋಲ್ವೋ ಬಸ್‌ ದರ್ಬಾರ್‌ಗೆ ಬ್ರೇಕ್?