Dharwad: ಕವಿವಿಯಲ್ಲಿ ಕೋಟಿ ಕೋಟಿ ಅಕ್ರಮ ಎಸಗಿದವರಿಗೆ ಎಸಿಬಿ ಶಾಕ್!
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ (Dharwad) ಇತ್ತಿಚೇಗೆ ಒಂದಲ್ಲ ಒಂದು ವಿವಾದದಲ್ಲಿ ಸಿಲುಕಿಕೊಂಡೇ ಬರುತ್ತಿದೆ. ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿ ಮೂವರ ವಿರುದ್ಧ ಎಸಿಬಿ (ACB) ತನಿಖೆಗೆ ರಾಜ್ಯಪಾಲರು ಹಸಿರು ನಿಶಾನೆ ತೋರಿದ್ದಾರೆ.
ಧಾರವಾಡ (ಜ. 05): ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ (Dharwad) ಇತ್ತಿಚೇಗೆ ಒಂದಲ್ಲ ಒಂದು ವಿವಾದದಲ್ಲಿ ಸಿಲುಕಿಕೊಂಡೇ ಬರುತ್ತಿದೆ. ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿ ಮೂವರ ವಿರುದ್ಧ ಎಸಿಬಿ (ACB) ತನಿಖೆಗೆ ರಾಜ್ಯಪಾಲರು ಹಸಿರು ನಿಶಾನೆ ತೋರಿದ್ದಾರೆ.
2014 ರಲ್ಲಿ ವಿವಿಯ ಕುಲಪತಿಯಾಗಿದ್ದ ಎಚ್.ಬಿ. ವಾಲೀಕಾರ ಅವರು ವಿವಿಯ ಕಟ್ಟಡದ ಮೇಲೆ 1 ಕೋಟಿ 10 ಲಕ್ಷ ವೆಚ್ಚದಲ್ಲಿ ಸೋಲಾರ್ ಪ್ಲೇಟ್ ಕೂಡಿಸಿದ್ದರು. ಅಲ್ಲಿ ಬರೊಬ್ಬರಿ 12 ಮೆಗಾವ್ಯಾಟ್ ವಿದ್ಯುತನ್ನ ಉತ್ಪಾದನೆ ಮಾಡಿ ವಿವಿಗೆ ಕೊಡಬೇಕು ಎಂಬ ಉದ್ದೇಶವಾಗಿತ್ತು. ಆದರೆ 2014 ರಿಂದ 2022 ರವರೆಗೂ ಒಂದೇ ಒಂದು ಯೂನಿಟ್ ವಿದ್ಯುತ್ ಉತ್ಪಾದನೆ ಕೂಡಾ ಆಗಿಲ್ಲ. ಕಳೆದ 2021 ರಲ್ಲಿ ಮಾಜಿ ಸಿಂಡಿಕೇಟ್ ಸದಸ್ಯರೊಬ್ಬರು ಎಸಿಬಿಗೆ, ದೂರು ನೀಡಿ, ರಾಜ್ಯಪಾಲರಿಗೆ ಪತ್ರ ಬರೆದಿದ್ರು. ದೂರಿನನ್ವಯ ಸದ್ಯ ರಾಜ್ಯಪಾಲರು ತನಿಖೆಗೆ ಆದೇಶ ಮಾಡಿದ್ದಾರೆ.
Dharwad Agriculture University: ಉಪಯೋಗಕ್ಕಿಲ್ಲದ 3 ಕೋಟಿ ರೂಪಾಯಿ ಸೋಲಾರ್ ಪ್ಯಾನೆಲ್ ಯೋಜನೆ
ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿ ಮೂವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆಗೆ ರಾಜ್ಯಪಾಲರು ಹಸಿರು ನಿಶಾನೆ ತೋರಿದ್ದಾರೆ. 7 ವರ್ಷಗಳ ಹಿಂದೆ ನಡೆದ ಈ ಪ್ರಕರಣಕ್ಕೆ ಮರುಜೀವ ಸಿಕ್ಕಿದ್ದು, ನಿವೃತ್ತರಾಗಿರುವ ಮೂವರಲ್ಲಿ ತಳಮಳ ಶುರುವಾಗಿದೆ. 2014ರಲ್ಲಿ ಪ್ರೊ. ಎಚ್.ಬಿ. ವಾಲೀಕಾರ ಕುಲಪತಿಯಾಗಿದ್ದ ಸಂದರ್ಭದಲ್ಲಿ ಕವಿವಿ ಆವರಣದಲ್ಲಿ ಸೌರ ವಿದ್ಯುತ್ ಘಟಕ ಅಳವಡಿಕೆ ಯೋಜನೆ ಅನುಷ್ಠಾನಗೊಳಿಸಲಾಗಿತ್ತು.
10 ವರ್ಷಗಳ ಗ್ಯಾರಂಟಿಯೊಂದಿಗೆ ಮೇ॥ ಟೆಕ್‌ಮಾರ್ಕ್ ಎಂಬ ಕಂಪನಿಗೆ 100 ಕಿಲೋ ವ್ಯಾಟ್ ಸಾಮರ್ಥ್ಯದ ಸೌರವಿದ್ಯುತ್ ಘಟಕ ನಿರ್ಮಿಸಲು ವಿವಿಧ ಷರತ್ತುಗಳೊಂದಿಗೆ ಗುತ್ತಿಗೆ ನೀಡಲಾಗಿತ್ತು. 2022 ರವರೆಗೆ ಒಂದು ಮೆಗಾವ್ಯಾಟ್ ಉತ್ಪಾದನೆಯಾಗಿಲ್ಲ. ಆದರೂ ಕಂಪನಿಗೆ ಪೂರ್ಣ ಹಣ ಪಾವತಿ ಮಾಡಲಾಗಿತ್ತು. 2014ರ ಫೆಬ್ರವರಿಯಲ್ಲಿ 36.92 ಲಕ್ಷ ರೂ. ಮುಂಗಡ ಹಣ ಪಾವತಿಸಲಾಗಿತ್ತು. ಸೌರ ವಿದ್ಯುತ್ ಘಟಕದ ನಿರ್ವಹಣೆಯನ್ನು ಪ್ರಾಯೋಗಿಕವಾಗಿ ಪರೀಕ್ಷಿಸದೆ, ವಿದ್ಯುತ್ ಉತ್ಪಾದಿಸದಿದ್ದರೂ ಬಾಕಿ ಹಣ 69.07 ಲಕ್ಷ ರೂ. ಪಾವತಿಸಲಾಗಿತ್ತು. ವಿಶ್ವವಿದ್ಯಾಲಯದ ಅನುದಾನ ಸದ್ಬಳಕೆ ಮಾಡದೆ ಭ್ರಷ್ಟಾಚಾರ ಎಸಗಿರುವ ಕುರಿತು ‘ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ’ ಕಾನೂನು ಸಮರ ಸಾರಿತ್ತು. ಅಂದಿನ ಕುಲಪತಿ ಪ್ರೊ. ಎಚ್.ಬಿ. ವಾಲೀಕಾರ, ನಿವೃತ್ತ ಕುಲಸಚಿವೆ ಡಾ. ಸಿ.ಎಸ್. ಕಣಗಲಿ ಹಾಗೂ ನಿವೃತ್ತ ರೆಸಿಡೆಂಟ್ ಇಂಜಿನಿಯರ್ ಬಗಲಿ ಗೆ ಸಂಕಷ್ಟ ಎದುರಾಗಿದೆ.
ವಿದ್ಯಾರ್ಥಿಗಳು ಅರಿಯದೆ ಮಾಡುವ ತಪ್ಪುಗಳಿಗೆ ಕವಿವಿ ಮುಲಾಜಿಲ್ಲದೆ ದಂಡ ವಿಧಿಸುತ್ತದೆ. ಆದರೆ, ಕಣ್ಣೆದುರೇ ಕೋಟಿ ರೂ. ಹಗರಣ ನಡೆದರೂ ಸುಮ್ಮನಿದೆ. ಸುದೀರ್ಘ ಕಾನೂನು ಹೋರಾಟ ರಾಜ್ಯಪಾಲರು ಎಸಿಬಿ ತನಿಖೆಗೆ ಅನುಮತಿ ನೀಡಿರುವುದು ಸ್ವಾಗತಾರ್ಹ. ಕವಿವಿ ಆಡಳಿತಾಧಿಕಾರಿಗಳು ಎಸಿಬಿ ತನಿಖೆಗೆ ಅಗತ್ಯ ದಾಖಲೆಗಳನ್ನು ಪೂರೈಸಿ ಸಹಕರಿಸಬೇಕು. ತಪ್ಪಿತಸ್ಥರಿಗೆ ತಕ್ಕ ಶಾಸ್ತಿ ಆಗಬೇಕು ಎಂಬುದು ಸಾರ್ವಜನಿಕರ ಒತ್ತಾಯ.