ಬೆಳಗಾವಿ; ಬಾಣಂತಿಯರು, ಹಸುಗೂಸುಗಳಿಗೆ ನರಕ ದರ್ಶನ, ಕಣ್ಣೀರ ಪ್ರವಾಹ
* ಬಾಣಂತಿಯರು, ಹಸುಗೂಸುಗಳಿಗೆ ನರಕ ದರ್ಶನ
* ನೆಪಕ್ಕೆ ಮಾತ್ರ ಕಾಳಜಿ ಕೇಂದ್ರವೇ?
* ಜನರಿಗೆ ಯಾವುದೇ ನೆರವು ಸಿಗುತ್ತಿಲ್ಲ
* ಅಥಣಿ ತಾಲೂಕಿನ ರಿಯಾಲಿಟಿ ಚೆಕ್
ಬೆಳಗಾವಿ/ಅಥಣಿ(ಜು. 28) ಪ್ರವಾಹದಿಂದ ಕಂಗೆಟ್ಟ ಬಾಣಂತಿಯರು, ಮಕ್ಕಳ ಕಣ್ಣೀರ ಕಥೆ ಇದು. ಪ್ರವಾಹದಲ್ಲಿ ಮನೆ ಮುಳುಗಿ ಬೀದಿಗೆ ಬಿದ್ದ ಬಾಣಂತಿಯರು, ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದಾರೆ.
ರಸ್ತೆಯಲ್ಲೇ ಪ್ರವಾಹ ಸಂತ್ರಸ್ತರ ಬದುಕು
ಅಥಣಿ ತಾ. ಜನವಾಡ ಗ್ರಾಮದ ಬಾಣಂತಿಯರ ಗೋಳಾಟದ ಕಥೆ-ವ್ಯಥೆ ಇದು. ರಾತ್ರೋರಾತ್ರಿ ಮನೆ ಬಿಟ್ಟು ಓಡೋಡಿ ಹೊರಬರುವ ಪರಿಸ್ಥಿತಿ ನಿರ್ಮಾಣ ಆಗಿದೆ. ರಾತ್ರಿ ಮನೆ ಬಿಟ್ಟು ಬರೋವಾಗ ಆಯ ತಪ್ಪಿ ಬಿದ್ದ ಬಾಣಂತಿ ಮತ್ತು ಮಗು ಗಾಯಗೊಂಡಿದ್ದಾರೆ ಬಾಣಂತಿ ಶಾಯಿನ್ ತೇರದಾಳ ಮೂರು ತಿಂಗಳ ಮಗುವಿನ ಕೈ ಮುರಿತವಾಗಿದೆ. ನೆಪಕ್ಕೆ ಮಾತ್ರ ಬಾಣಂತಿ ಕೇಂದ್ರ ತೆರೆಯಲಾಗಿದ್ದು ಇದರಿಂದ ಯಾರಿಗೂ ನೆರವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಒಂದು ರಿಯಾಲಿಟಿ ಚೆಕ್ ಇಲ್ಲಿದೆ.