Asianet Suvarna News Asianet Suvarna News

ದಶಕಗಳ ಮಳೆಗೆ ಸಾಕ್ಷಿಯಾಯ್ತು ಕಲಬುರ್ಗಿ; ಮುಂದುವರೆದ ರಕ್ಷಣಾ -ಪರಿಹಾರ ಕಾರ್ಯ

ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಲಬುರ್ಗಿ ತತ್ತರಿಸಿ ಹೋಗಿದೆ. ಎರಡು ದಶಕಗಳಲ್ಲಿ ಇದೇ ಮೊದಲು ಎನ್ನುವಂತೆ ಮಳೆ ಸುರಿದಿದೆ. ಸುಮಾರು 10 ತಾಸುಗಳ ತನಕ ಎಡೆಬಿಡದೇ ಸುರಿದ ಮಳೆಗೆ ಕಲ್ಬುರ್ಗಿ ಭಾಗಶಃ ಮುಳುಗಿದೆ. 

ಬೆಂಗಳೂರು (ಅ. 15): ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಲಬುರ್ಗಿ ತತ್ತರಿಸಿ ಹೋಗಿದೆ. ಎರಡು ದಶಕಗಳಲ್ಲಿ ಇದೇ ಮೊದಲು ಎನ್ನುವಂತೆ ಮಳೆ ಸುರಿದಿದೆ. ಸುಮಾರು 10 ತಾಸುಗಳ ತನಕ ಎಡೆಬಿಡದೇ ಸುರಿದ ಮಳೆಗೆ ಕಲ್ಬುರ್ಗಿ ಭಾಗಶಃ ಮುಳುಗಿದೆ. ಚಿತ್ತಾಪುರದ ಕಡಬೂರು ಗ್ರಾಮ ಸಂಪೂರ್ಣ ಜಲಾವೃತವಾಗಿದೆ.

ಇಲ್ಲಿ ಮಳೆ ಬಂದರೆ ಜನರ ಬದುಕು ದುಸ್ತರ; ಇವರ ಗೋಳು ಕೇಳೋರೇ ಇಲ್ಲ..!

ನಗರದ ಕೆಳ ಪ್ರದೇಶಗಳ 20 ಕ್ಕೂ ಹೆಚ್ಚು ಬಡಾವಣೆಗಳ 100 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.  ಪರಿಹಾರ ಕಾರ್ಯಾಚರಣೆ, ರಕ್ಷಣಾ ಕಾರ್ಯಾಚರಣೆ ಬಗ್ಗೆ ಕಲಬುರ್ಗಿ ಸಂಸದ ಉಮೇಶ್ ಜಾಧವ್ ಮಾತನಾಡಿದ್ದಾರೆ.