ಕಲಬುರಗಿ: ನಡೆಯಲಾಗದ ಕೊರೋನಾ ಸೋಂಕಿತೆಯನ್ನು ಮನೆಯಲ್ಲೇ ಬಿಟ್ಟು ಹೋದ ಆಂಬ್ಯುಲೆನ್ಸ್!

ಆರೋಗ್ಯಾಧಿಕಾರಿಗಳ ನಿರ್ಲಕ್ಷ್ಯ| ಕೊರೋನಾ ಸೋಂಕಿತ ಮಹಿಳೆಯಲ್ಲ ಆಸ್ಪತ್ರೆದೆ ದಾಖಲಿಸದೆ ಮನೆಯಲ್ಲೇ ಬಿಟ್ಟುಹೋದ ಆರೋಗ್ಯ ಇಲಾಖೆಯ ಸಿಬ್ಬಂದಿ| ಅಮಾನವಿಯವಾಗಿ ವರ್ತಿಸಿದ ಆರೋಗ್ಯಾಧಿಕಾರಿಗಳು|

First Published Jul 8, 2020, 2:17 PM IST | Last Updated Jul 8, 2020, 2:17 PM IST

ಕಲಬುರಗಿ(ಜು.08): ಆರೋಗ್ಯಾಧಿಕಾರಿಗಳು ನಿರ್ಲಕ್ಷ್ಯ ತೋರಿದ ಘಟನೆ ನಗರದ ಅತ್ತರ್‌ ಕಾಂಪೌಂಡ್‌ನಲ್ಲಿ ನಡೆದಿದೆ. ಹೌದು, ವೃದ್ಧೆಗೆ ಮಹಾಮಾರಿ ಕೊರೋನಾ ವೈರಸ್‌ ಬಂದರೂ ಕೂಡ ಆರೋಗ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ಯದೆ ಮನೆಯಲ್ಲಿಯೇ ಬಿಟ್ಟು ಹೋಗುವ ಮೂಲಕ ಅಮಾನವೀಯವಾಗಿ ವರ್ತಿಸಿದ್ದಾರೆ. 

ರಾಜ್ಯದಲ್ಲಿ ನಿಲ್ಲದ ಕೊರೋನಾ ರಣಕೇಕೆ: ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ..!

ಕೊರೋನಾ ಸೋಂಕಿತ ಮಹಿಳೆ ಮೂರನೇ ಮಹಡಿಯ ಮನೆಯಲ್ಲಿ ವಾಸವಾಗಿದ್ದಾರೆ. ಜೊತೆಗೆ ವೃದ್ಧೆಗೆ ಕಾಲು ಕೂಡ ಮುರಿದಿದೆ. ಹೀಗಾಗಿ ಕೆಳಗಡೆ ಬರೋದಕ್ಕೆ ಸಾಧ್ಯವಾಗಿಲ್ಲ.ಆದರೆ, ಸೋಂಕಿತರನ್ನ ಆಸ್ಪತ್ರೆಗೆ ಸಾಗಿಸಬೇಕಾದ ಆಮಬುಲೆನ್ಸ್‌ ಸಿಬ್ಬಂದಿ ಮಾತ್ರ ವೃದ್ಧೆಯನ್ನ ಮನೆಯಲ್ಲಿಯೇ ಬಿಟ್ಟು ಹೋಗಿದ್ದಾರೆ.