ರಾಜ್ಯದಲ್ಲಿ ನಿಲ್ಲದ ಕೊರೋನಾ ರಣಕೇಕೆ: ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ..!

ಕಳೆದ ಐದು ದಿನಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ| ಪ್ರತಿ 100 ಪರೀಕ್ಷೆಯಲ್ಲಿ 10 ಮಂದಿಗೆ ಸೋಂಕು| ಜೂನ್‌ ಮೊದಲ ವಾರದಲ್ಲಿ ಶೇ.1 ರಷ್ಟು ಇದ್ದ ಸೋಂಕು, ಜುಲೈ ಆರಂಭದ ಐದು ದಿನದಲ್ಲಿ ಶೇ. 10 ಕ್ಕೇರಿಕೆ|

First Published Jul 8, 2020, 1:30 PM IST | Last Updated Jul 8, 2020, 1:30 PM IST

ಬೆಂಗಳೂರು(ಜು.08): ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್‌ ರಣಕೇಕೆ ಹಾಕುತ್ತಿದೆ. ಹೌದು, ಕಳೆದ ಐದು ದಿನಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಪ್ರತಿ 100 ಪರೀಕ್ಷೆಯಲ್ಲಿ 10 ಮಂದಿಗೆ ಸೋಂಕು ತಗಲಿರುವುದು ದೃಢವಾಗುತ್ತಿದೆ. 

ಕೊರೊನಾ ಬರದಂತೆ ತಡೆಯಲು ಹೊಸ ಐಡ್ಯಾ; ಹೀಗೊಂದು ಮಾದರಿ ಪೊಲೀಸ್ ಠಾಣೆ

ಜೂನ್‌ ಮೊದಲ ವಾರದಲ್ಲಿ ಶೇ.1 ರಷ್ಟು ಇದ್ದ ಸೋಂಕು, ಜುಲೈ ಆರಂಭದ ಐದು ದಿನದಲ್ಲಿ ಶೇ. 10 ಕ್ಕೇರಿಕೆಯಾಗಿದೆ. ಇದರಿಂದ ರಾಜ್ಯದ ಜನತೆ ಭಯ ಬೀಳುವಂತಾಗಿದೆ. ಕೊರೋನಾ ವೈರಸ್‌ ದಿನೇ ದಿನೆ ತನ್ನ ಅಟ್ಟಹಾಸ ಮೆರೆಯುತ್ತಿದೆ.