ಜನತಾ ಕರ್ಫ್ಯೂ: ಸಕ್ಕರೆ ನಾಡು ಸ್ತಬ್ಧ...! ಇಲ್ಲಿದೆ ವಿಡಿಯೋ
ಮಂಡ್ಯದಲ್ಲಿ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತವಾಗಿದೆ. ಜನರು ಸ್ವಯಂಪ್ರೇರಿತರಾಗಿ ಬೆಂಬಲ ಸೂಚಿಸಿದ್ದಾರೆ. ರಸ್ತೆಗಳೆಲ್ಲವೂ ಖಾಲಿಯಾಗಿದ್ದು, ಅಗತ್ಯ ವಸ್ತುಗಳನ್ನು ಖರೀದಿಸಲು ಜನ ಹೊರಗೆ ಬಂದಿದ್ದಾರೆ.
ಮಂಡ್ಯ(ಮಾ.22): ಮಂಡ್ಯದಲ್ಲಿ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತವಾಗಿದೆ. ಜನರು ಸ್ವಯಂಪ್ರೇರಿತರಾಗಿ ಬೆಂಬಲ ಸೂಚಿಸಿದ್ದಾರೆ. ರಸ್ತೆಗಳೆಲ್ಲವೂ ಖಾಲಿಯಾಗಿದ್ದು, ಅಗತ್ಯ ವಸ್ತುಗಳನ್ನು ಖರೀದಿಸಲು ಜನ ಹೊರಗೆ ಬಂದಿದ್ದಾರೆ.
ಸಾಮಾನ್ಯವಾಗಿ ಬಂದ್‌ಗಳಿಗೆ ಕರೆ ಕೊಟ್ಟಾಗ ಸ್ವಲ್ಪ ಪ್ರತಿಭಟನೆಗಳು ನಡೆಯುತ್ತವೆ. ಆದರೆ ಈ ಬಾರಿ ಮಾತ್ರ ಜನ ಸಂಪೂರ್ಣವಾಗಿ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಜನರು ಸ್ವಯಂ ಪ್ರೇರಣೆಯಿಂದ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿದ್ದಾರೆ.
ಮೊದಲ ಬಾರಿ ತಮಗೇ ತಾವು ಕರ್ಫ್ಯೂ ಹಾಕಿಕೊಂಡ ಜನ, ಫೋಟೋಗಳಲ್ಲಿ ನೋಡಿ ಬಂದ್ ಸ್ಥಿತಿ!
ಮಂಡ್ಯದ ಸಂಜಯ ಸರ್ಕಲ್‌ನಲ್ಲಿ ಬಂದ್ ದಿನ ಸಾಮಾನ್ಯವಾಗಿ ಒಂದಷ್ಟು ಪ್ರತಿಭಟನೆ ಹೋರಾಟ ನಡೆಯುತ್ತವೆ. ಆದರೆ ಈ ಬಾರಿ ಸಂಪೂರ್ಣ ಸ್ತಬ್ಧವಾಗಿದೆ. ಪೌರಕಾರ್ಮಿಕರು ಬೆಳಗಿನ ಜಾವ ಕೆಲಸ ಮುಗಿಸಿದ್ದಾರೆ.