ಬಳ್ಳಾರಿ: ಒಂದು ರೂ.ಗೆ ಹೊಟ್ಟೆ ತುಂಬಾ ಊಟ..!
* ಪ್ರತ್ಯೇಕ ವಾಹನದ ವ್ಯವಸ್ಥೆ
* ಜನರ ಹೊಟ್ಟೆ ತುಂಬಿಸೋ ಕೆಲಸ ಮಾಡುತ್ತಿರುವ ಜೈನ ಸಂಘಟನೆ
* ಜನರ ಸೇವೆ ಮಾಡಲು ಸರ್ಕಾರವೇ ಮುಂದಾಗಬೇಕೆಂದೇನಿಲ್ಲ
ಬಳ್ಳಾರಿ(ಆ.28): ಎಲ್ಲ ದಾನಕ್ಕಿಂತ ಶ್ರೇಷ್ಠ ದಾನ ಅನ್ನದಾನ ಎನ್ನುವ ಮಾತಿದೆ. ಆದ್ರೆ, ಅದು ಅನುಷ್ಠಾನಕ್ಕೆ ಬರ ಬೇಕಾದ್ರೆ ಸರ್ಕಾರವಷ್ಟೇ ಅಲ್ಲ ಪ್ರತಿಯೊಬ್ಬ ಉಳ್ಳ ಮನಸ್ಸುಗಳು ಕೈಜೋಡಿಸೋ ಅವಶ್ಯಕತೆ ಇದೆ. ಇದೀಗ ಇದೇ ದಾರಿಯಲ್ಲಿ ಬಳ್ಳಾರಿಯ ಜೈನ ಸಂಘಟನೆ ಮುಂದಾಗಿದ್ದು, ಇಂದಿನಿಂದ ಪ್ರತಿದಿನ ಐದುನೂರು ಜನರಿಗೆ ಒಂದು ರೂಪಾಯಿಗೆ ಒಂದು ಊಟವನ್ನು ನೀಡೋ ಯೋಜನೆಗೆ ಕೈ ಹಾಕಿದೆ. ಇದೆಲ್ಲದರ ಕುರಿತು ಕಂಪ್ಲೀಟ್ ಮಾಹಿತಿ ಈ ವಿಡಿಯೋದಲ್ಲಿದೆ.