Yadgir| ಬಸ್ ಇಲ್ಲದೆ ಗ್ರಾಮೀಣ ವಿದ್ಯಾರ್ಥಿಗಳ ಪರದಾಟ..!
* ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಶಾರದಹಳ್ಳಿ ಗ್ರಾಮದಲ್ಲಿ ನಡೆದ ಘಟನೆ
* ಬೆಳಿಗ್ಗೆ 8 ಗಂಟೆಗೆ ಬರಬೇಕಾಗಿದ್ದ ಬಸ್ 10 ಗಂಟೆಗೆ ಬಂದಿದೆ
* ಸರಿಯಾದ ಸಮಯಕ್ಕೆ ಬಸ್ ಬಾರದಿದ್ದರಿಂದ ಕ್ಲಾಸ್ ಮಿಸ್
ಯಾದಗಿರಿ(ನ.10): ಬಸ್(Bus) ಸೌಕರ್ಯವಿಲ್ಲದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು(Students) ಪಡಬಾರದ ಸಂಕಷ್ಟಗಳನ್ನ ಎದುರಿಸುತ್ತಿರುವಂತ ಘಟನೆ ಯಾದಗಿರಿ(Yadgir) ಜಿಲ್ಲೆಯ ಶಹಾಪುರ(Shahapur) ತಾಲೂಕಿನ ಶಾರದಹಳ್ಳಿ ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ. ಸಮಯಕ್ಕೆ ಸರಿಯಾಗಿ ಬಸ್ ಸಿಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಸರಿಯಾದ ಸಮಯಕ್ಕೆ ಬಸ್ ಬಾರದಿದ್ದರಿಂದ ಕ್ಲಾಸ್(Class) ಮಿಸ್ ಆಗಿದೆ.
Crime : ಬೆಂಗಳೂರು ಟೆಕ್ಕಿಗಳಿಂದ NRI ಅಮೆರಿಕಾ ವ್ಯಕ್ತಿಗೆ ದೋಖಾ
ಬೆಳಿಗ್ಗೆ 8 ಗಂಟೆಗೆ ಬರಬೇಕಾಗಿದ್ದ ಬಸ್ 10 ಗಂಟೆಗೆ ಬಂದಿದೆ. ಹೀಗಾಗಿ ವಿದ್ಯಾರ್ಥಿಗಳು ಶಾಲೆಗಳಿಗೆ ತಡವಾಗಿ ಆಗಮಿಸಿದ್ದರಿಂದ ಕ್ಲಾಸ್ ಮಿಸ್ ಆಗಿದೆ ಅಂತ ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಬಸ್‌ಗಾಗಿ ಕಾದು ಕಾದು ವಿದ್ಯಾರ್ಥಿಗಳು ಸುಸ್ತಾಗಿದ್ದಾರೆ. ಶಾರದಹಳ್ಳಿಯಿಂದ ಶಹಾಪುರ ಪಟ್ಟಣಕ್ಕೆ ಆಗಮಿಸಬೇಕಾಗಿದ್ದ ಬಸ್ ತಡವಾಗಿ ಬಂದಿದೆ. ಈ ಸಮಸ್ಯೆ ಗೊತ್ತಿದ್ದರೂ ಕೂಡ ಸಾರಿಗೆ ಅಧಿಕಾರಿಗಳು ಮಾತ್ರ ಪರಿಹಿರಿಸಿಲ್ಲ ಅಂತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.