Koppal: ಬಡವರ ಹಸಿವು ನೀಗಿಸುತ್ತಿರೋ ಇಂದಿರಾ ಕ್ಯಾಂಟೀನ್ ಬಂದ್?
* ಆರ್ಥಿಕ ಸಮಸ್ಯೆಯೋ? ಕಾಂಗ್ರೆಸ್ ಸರ್ಕಾರದ ಯೋಜನೆ ಬಗ್ಗೆ ಅಸಡ್ಡೆಯೋ?
* ಕಳೆದ 8 ತಿಂಗಳಿಂದ ಸರ್ಕಾರ ಬಿಲ್ ಪಾವತಿಸಿಲ್ಲವೆಂಬ ಆರೋಪ
* ಗುತ್ತಿಗೆದಾರರಿಗೆ ಕೋಟ್ಯಂತರ ರೂಪಾಯಿ ಬಾಕಿ ಉಳಿಸಿರುವ ಸರ್ಕಾರ
ಕೊಪ್ಪಳ(ಏ.07): ಆರ್ಥಿಕ ಸಮಸ್ಯೆಯೋ? ಕಾಂಗ್ರೆಸ್ ಸರ್ಕಾರದ ಯೋಜನೆ ಬಗ್ಗೆ ಅಸಡ್ಡೆಯೋ ಗೊತ್ತಿಲ್ಲ. ರಾಜ್ಯ ಸರ್ಕಾರವಂತೂ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ಕಳೆದ 8 ತಿಂಗಳಿಂದ ಬಿಲ್ ಪಾವತಿಸಿಲ್ಲವಂತೆ. ಈ ಕಾರಣಕ್ಕೆ ಖರ್ಚಿನಲ್ಲಿ ಬಡವರ ಹಸಿವು ನೀಗಿಸುತ್ತಿರೋ ಇಂದಿರಾ ಕ್ಯಾಂಟೀನ್ ಬಂದ್ ಆಗುವ ಭೀತಿಯಲ್ಲಿವೆ.
ಕರ್ನಾಟಕದಲ್ಲಿ 2ನೇ ಬಾರಿಗೆ ಬಿಜೆಪಿ ಅಧಿಕಾರ ಹಿಡಿದ ಬೆನ್ನಲ್ಲೇ ಹೆಚ್ಚು ಚರ್ಚೆ ಆಗಿದ್ದೇ ಇಂದಿರಾ ಕ್ಯಾಂಟೀನ್. ಹೌದು, ಹೆಸರು ಬದಲಾಗುವ ಯೋಜನೆಯ ಲಿಸ್ಟನಲ್ಲಿದ್ದ ಇಂದಿರಾ ಕ್ಯಾಂಟೀನ್ ರಾಜ್ಯದಲ್ಲಿ ಇನ್ನೂ ಅದೇ ಹೆಸರಿನಲ್ಲೇ ನಡೆಯುತ್ತಿದೆ. ಆದ್ರೆ, ಕೊಪ್ಪಳ ಜಿಲ್ಲೆ ಸೇರಿ ಕೆಲ ಕಡೆ ಮುಚ್ಚುವ ಭೀತಿ ಎದುರಾಗಿದೆ. ಕ್ಯಾಂಟೀನ್ ನಡೆಸುತ್ತಿರುವ ಗುತ್ತಿಗೆದಾರರಿಗೆ ಸರ್ಕಾರ ಕೋಟ್ಯಂತರ ರೂಪಾಯಿ ಬಾಕಿ ಉಳಿಸಿ ಕೊಂಡಿದೆಯಂತೆ. ಬಾಕಿ ಹಣ ಪಾವತಿಯ ಹೊರತಾಗಿ ಕ್ಯಾಂಟೀನ್ ನಡೆಸುವುದು ಕಷ್ಟ ಸಾಧ್ಯ ಎಂಬ ತೀರ್ಮಾನಕ್ಕೆ ಬಂದಿರೋ ಗುತ್ತಿಗೆದಾರರು ಕ್ಯಾಂಟೀನ್ ನಲ್ಲಿ ಊಟ- ಉಪಹಾರ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದು, ಇದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ ಅಂತ ಸ್ಥಳೀಯರಾದ ಕೆ.ಎಸ್.ಕೊಡತಗೇರಿ ತಿಳಿಸಿದ್ದಾರೆ.
Bagalkot: ಕೊರೋನಾ ವಾರಿಯರ್ಸ್ ಸೇವೆಯಿಂದ ಏಕಾಏಕಿ ಬಿಡುಗಡೆ: ಅತಂತ್ರರಾದ ಕುಟುಂಬಗಳು
ಕಳೆದ 2017ರಲ್ಲಿ ಮೊದಲಿಗೆ ಬೆಂಗಳೂರಿನಲ್ಲಿ ಆರಂಭವಾದ ಇಂದಿರಾ ಕ್ಯಾಂಟಿನ್ ಗಳು ಈಗ ರಾಜ್ಯಾದ್ಯಂತ ನಡೆಯುತ್ತಿವೆ. ಊಟಕ್ಕೆ 10 ರೂಪಾಯಿ ಹಾಗು ಟಿಫಿನ್ ಗೆ 5 ರೂಪಾಯಿ ಬೆಲೆ ನಿಗದಿ ಮಾಡಲಾಗಿದ್ದು, ಬಡವರಿಗೆ ತುಂಬಾ ಅನುಕೂಲವಾಗಿದೆ. ಒಂದು ಊಟಕ್ಕೆ ತಗಲುವ ಇತರೇ ವೆಚ್ಚವನ್ನ ಸರ್ಕಾರ ಪಾವತಿ ಮಾಡುತ್ತಿದ್ದು, ಕಳೆದ 8 ತಿಂಗಳಿಂದ ಇಂದಿರಾ ಕ್ಯಾಂಟಿನ್ ನಡೆಸುವ ಯಾವೊಂದು ಗುತ್ತಿಗೆದಾರರಿಗೂ ಸರ್ಕಾರ ಅನುದಾನ ನೀಡಿಲ್ಲವಂತೆ.
ಕೊಪ್ಪಳ, ಬಳ್ಳಾರಿ, ಕಲಬುರಗಿ, ರಾಯಚೂರು, ಶಿವಮೊಗ್ಗ ಸೇರಿ 8 ಜಿಲ್ಲೆಗಳಲ್ಲಿ ಸೆಫ್ಟಾನ್ ಸ್ಟೂಡೆಂಟ್ ಹಾಸ್ಪಿಟಿಲಿಟಿ ಪ್ರೈವೇಟ್ ಲಿಮಿಟೆಡ್ ಕಂಪನಿಯು ಗುತ್ತಿಗೆ ಪಡೆದಿದೆ. ಈ ಕಂಪನಿವೊಂದಕ್ಕೆ ಸರ್ಕಾರ ಇಲ್ಲಿಯವರೆಗೆ ಒಟ್ಟು 24 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆಯಂತೆ. ಇದರಿಂದ ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರ ನೀಡುವು ದನ್ನನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸವುದು ಗುತ್ತಿಗೆದಾರರಿಗೆ ಅನಿವಾರ್ಯ ಆಗಿದೆಯಂತೆ. ಇನ್ನೂ ಪ್ರತಿದಿನ ವಿದ್ಯಾರ್ಥಿಗಳು ಮತ್ತು ಬಡವರು ಈ ಹೊಟೆಲ್ ಗೆ ಬಂದ್ ಊಟ ಮಾಡುತ್ತಿದ್ದಿವಿ.. ಆದ್ರೆ ಹೋಟೆಲ್ ಬಂದ್ ಆದರೆ ನಮಗೆ ಕಷ್ಟ ಆಗುತ್ತದೆ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು.
ಇಂದಿರಾ ಕ್ಯಾಂಟೀನ್ ಬಗ್ಗೆ ಮೊದಲಿಂದಲೂ ಬಿಜೆಪಿ ನಾಯಕರಿಗೆ ಉತ್ತಮ ಅಭಿಪ್ರಾಯ ಇಲ್ಲ. ಈ ಮೂಲಕ ಸಿದ್ದರಾಮಯ್ಯ ಸರ್ಕಾರದ ಯೋಜನೆಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ತಿಲಾಂಜಲಿ ಇಡುವ ಸಾಧ್ಯತೆ ಇದೆ.