Chikkaballapura: ಟ್ರೆಕ್ಕಿಂಗ್ ವೇಳೆ ಕಂದಕಕ್ಕೆ ಬಿದ್ದ ವಿದ್ಯಾರ್ಥಿ, ಸೇನೆಯಿಂದ ರೋಚಕ ಕಾರ್ಯಾಚರಣೆ

ಬ್ರಹ್ಮಗಿರಿಯಲ್ಲಿ (Brahmagiri) ಟ್ರೆಕ್ಕಿಂಗ್‌ (Trekking)  ವೇಳೆ ಅಕಸ್ಮಿಕವಾಗಿ ಕಾಲುಜಾರಿ ಬರೋಬ್ಬರಿ 250 ಅಡಿಯಷ್ಟುಅಳಕ್ಕೆ ಬಿದ್ದು ದುರ್ಗಮ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಬೆಂಗಳೂರಿನ (Bengaluru) ವಿದ್ಯಾರ್ಥಿಯೊಬ್ಬನನ್ನು ವಾಯುಪಡೆ ಸಿಬ್ಬಂದಿ ಹೆಲಿಕಾಪ್ಟರ್‌ ಬಳಸಿ ರಕ್ಷಿಸಿದ್ದಾರೆ. 

First Published Feb 21, 2022, 11:20 AM IST | Last Updated Feb 21, 2022, 11:22 AM IST

ಬೆಂಗಳೂರು (ಫೆ. 21): ಬ್ರಹ್ಮಗಿರಿಯಲ್ಲಿ (Brahmagiri) ಟ್ರೆಕ್ಕಿಂಗ್‌ (Trekking)  ವೇಳೆ ಅಕಸ್ಮಿಕವಾಗಿ ಕಾಲುಜಾರಿ ಬರೋಬ್ಬರಿ 250 ಅಡಿಯಷ್ಟುಅಳಕ್ಕೆ ಬಿದ್ದು ದುರ್ಗಮ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಬೆಂಗಳೂರಿನ (Bengaluru) ವಿದ್ಯಾರ್ಥಿಯೊಬ್ಬನನ್ನು ವಾಯುಪಡೆ ಸಿಬ್ಬಂದಿ ಹೆಲಿಕಾಪ್ಟರ್‌ ಬಳಸಿ ರಕ್ಷಿಸಿದ್ದಾರೆ. ಬೆಂಗಳೂರಿನ ಪಿಇಎಸ್‌ ವಿಶ್ವ ವಿದ್ಯಾಲಯದಲ್ಲಿ ಪ್ರಥಮ ವರ್ಷದ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಯಾಗಿರುವ ದೆಹಲಿ ಮೂಲದ ನಿಶಾಂತ್‌ ಕೌಲ್‌(19) ರಕ್ಷಿಸಲ್ಪಟ್ಟ ಯುವಕ.

Student Trapped in Nandi Hills: ಟ್ರೆಕ್ಕಿಂಗ್ ವೇಳೆ ಜಾರಿ ಬಿದ್ದ ಯುವಕನ ರೋಚಕ ರಕ್ಷಣೆ!

ವಾರಾಂತ್ಯದ ಹಿನ್ನೆಲೆಯಲ್ಲಿ ನಿಶಾಂತ್‌ ಭಾನುವಾರ ಬೆಳಗ್ಗೆ 5.30ಕ್ಕೆ ನಂದಿಗಿರಿಧಾಮದ ಸಮೀಪ ಇರುವ ಬ್ರಹ್ಮಗಿರಿಗೆ ಟ್ರಕ್ಕಿಂಗ್‌ ತೆರಳಿದ್ದಾನೆ. ಈ ವೇಳೆ ಅಕಸ್ಮಾತಾಗಿ ಕಾಲು ಜಾರಿ ಸುಮಾರು 250 ಅಡಿ ಆಳದ ದುರ್ಗಮ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾನೆ. ಅದೃಷ್ಟವಶಾತ್‌ ಆತನ ಜೇಬಿನಲ್ಲಿ ಮೊಬೈಲ್‌ ಫೋನ್‌ ಸುರಕ್ಷಿತವಾಗಿದ್ದರಿಂದ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು ತಕ್ಷಣವೇ ಅವರು ವಿಷಯವನ್ನು ನಂದಿ ಠಾಣೆ ಪೊಲೀಸರ ಗಮನಕ್ಕೆ ತಂದಿದ್ದಾರೆ. ಕೂಡಲೇ ಜಿಲ್ಲಾಡಳಿತ ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ತಂಡಗಳನ್ನು ಸಂಪರ್ಕಿಸಿ ಪರಿಸ್ಥಿತಿ ಬಗ್ಗೆ ಗಮನ ಸೆಳೆದಾಗ ವಾಯಪಡೆಯ ಅಧಿಕಾರಿಗಳು ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಸತತ ಒಂದೂವರೆ ಗಂಟೆ ಕಾಲ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಯನ್ನು ರಕ್ಷಿಸಿದ್ದಾರೆ.