Hubballi Dharwad : ನಕಲಿ ಪ್ರಮಾಣ ಪತ್ರ ಕೊಟ್ಟರಾ, ತಹಶೀಲ್ದಾರ್‌ಗೂ ಸಂಕಟ
* ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುಣಾವಣೆಯಲ್ಲಿ ಅಕ್ರಮ
* ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸದಸ್ಯರಾಗಿ ಆಯ್ಕೆಯಾಗಿರುವ ಮೂವರು
* ಚುನಾವಣೆಗೆ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ತಹಶೀಲ್ದಾರ್
* ತಹಶೀಲ್ದಾರ್, ಮೂವರು ಪಾಲಿಕೆ ಸದಸ್ಯರ ಮೇಲೆ ತೂಗುಗತ್ತಿ
* ದಾಖಲಾತಿಗಳೊಂದಿಗೆ ಕೋರ್ಟ್ ಮೊರೆ ಹೋದ ಸೋತ ಅಭ್ಯರ್ಥಿಗಳು
ಧಾರವಾಡ(ಡಿ. 23) ಹುಬ್ಬಳ್ಳಿ-ಧಾರವಾಡ (Hubballi Dharwad )ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಆಯ್ಕೆಯಾದ ಮೂವರು ಸದಸ್ಯರು (Corporators)ನಕಲಿ ಜಾತಿ ಪ್ರಮಾಣ ಪತ್ರ ( Fake Caste Certificate )ನೀಡಿ ಆಯ್ಕೆ ಯಾಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ..ಇನ್ನೂ ಸೋತ ಮೂವರು ಅಭ್ಯರ್ಥಿಗಳು ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ. ಮೆಲ್ನೋಟಕ್ಕೆ ಮೂವರು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸದಸ್ಯರಾಗಿ ಆಯ್ಕೆ ಆಗಿದ್ದಾರೆ ಎನ್ನುವ ಬಗ್ಗೆ ಸೋತ ಅಭ್ಯರ್ಥಿಗಳು ದಾಖಲೆ ನೀಡಿದ್ದಾರೆ.ಚಇನ್ನು ಈ ಮೂವರು ಆಭ್ಯರ್ಥಿಗಳಿಗೆ ನಕಲಿ ಜಾತಿ ಪ್ರಮಾಣ ಪತ್ರವನ್ನ ಕೊಟ್ಟ ಅಧಿಕಾರಿಯ ಮೇಲೂ ತೂಗು ಕತ್ತಿ ನೇತಾಡುತ್ತಿದೆ.
Karnataka Assembly Session : ಬಿಬಿಎಂಪಿಗೆ ಸಿಸಿ, ಒಸಿ ಶುಲ್ಕ ಸಂಗ್ರಹ ಅಧಿಕಾರ : ತಿದ್ದುಪಡಿ ಕಾಯ್ದೆಗೆ ಅಂಗೀಕಾರ
ಇನ್ನು ಕಳೆದ ಮೂರು ತಿಂಗಳ ಹಿಂದೆ ನಡೆದ ಪಾಲಿಕೆಯ ಚುನಾವಣೆಯಲ್ಲಿ ಧಾರವಾಡ ತಹಶಿಲ್ದಾರ ಕಚೇರಿಯಲ್ಲಿ ಜಾತಿ ಪ್ರಮಾಣ ಪತ್ರವನ್ನ ಪಡೆದುಕೊಂಡು, ಅದೇ ಜಾತಿ ಪ್ರಮಾಣ ಪತ್ರದಿಂದ ಆಯ್ಕೆಯಾಗಿ ಚುನಾವಣಾ ಆಯೋಗಕ್ಕೂ ಕಣ್ಣಿಗೆ ಮಣ್ಣು ಎರಚಿ ಸದಸ್ಯರಾಗಿದ್ದಾರೆ. ಇನ್ನು ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ತಹಶಿಲ್ದಾರ ಕೂಡಾ ಭಾಗಿಯಾಗಿದ್ದಾರೆ ಎಂದು ಸೋತ ಅಭ್ಯರ್ಥಿಗಳು ಅಧಿಕಾರಿಗಳ ವಿರುದ್ದ ಗಂಭೀರ ಆರೋಪವನ್ನ ಮಾಡಿದ್ದಾರೆ.