Asianet Suvarna News Asianet Suvarna News

ಮೈಸೂರಿನಲ್ಲಿ ಕೊರೊನಾ ವಾರಿಯರ್ಸ್‌ಗೆ ಹೂಮಳೆಗೈದು ಗೌರವ ಸಲ್ಲಿಸಿದ ಜನತೆ

ಜಿಲ್ಲೆಯಲ್ಲಿ ಕಳೆದ 14 ದಿನಗಳಿಂದ ಯಾವುದೇ ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಜಿಲ್ಲೆಯನ್ನು ಇನ್ನಿಲ್ಲದಂತೆ ಕಾಡಿದ್ದ ನಂಜನಗೂಡಿನ ಫಾರ್ಮಾ ಕಂಪನಿಯಲ್ಲೂ ಯಾವುದೇ ಹೊಸ ಪ್ರಕರಣಗಳು ಕಂಡುಬರುತ್ತಿಲ್ಲ. ಅಲ್ಲದೆ, ಈ ವರೆಗೆ ಪತ್ತೆಯಾಗಿರುವ 88 ಪ್ರಕರಣಗಳ ಪೈಕಿ 86 ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. 

First Published May 15, 2020, 12:13 PM IST | Last Updated May 15, 2020, 12:19 PM IST

ಮೈಸೂರು (ಮೇ. 15): ಜಿಲ್ಲೆಯಲ್ಲಿ ಕಳೆದ 14 ದಿನಗಳಿಂದ ಯಾವುದೇ ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಜಿಲ್ಲೆಯನ್ನು ಇನ್ನಿಲ್ಲದಂತೆ ಕಾಡಿದ್ದ ನಂಜನಗೂಡಿನ ಫಾರ್ಮಾ ಕಂಪನಿಯಲ್ಲೂ ಯಾವುದೇ ಹೊಸ ಪ್ರಕರಣಗಳು ಕಂಡುಬರುತ್ತಿಲ್ಲ. ಅಲ್ಲದೆ, ಈ ವರೆಗೆ ಪತ್ತೆಯಾಗಿರುವ 88 ಪ್ರಕರಣಗಳ ಪೈಕಿ 86 ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.

14 ದಿನಗಳಿಂದ ಸೋಂಕಿಲ್ಲ: ಮೈಸೂರು ಕಿತ್ತಳೆ ವಲಯದತ್ತ

ಇನ್ನು ಇಬ್ಬರು ಸಕ್ರಿಯ ಸೋಂಕಿತರು ಮಾತ್ರವೇ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರೆ ಜಿಲ್ಲೆ ಕೊರೋನಾ ಮುಕ್ತವಾಗಲಿದೆ. ಕೊರೊನಾ ಮುಕ್ತಿಗಾಗಿ ವಾರಿಯರ್ಸ್‌ ರೀತಿ ದುಡಿದ ವೈದ್ಯಕೀಯ ಸಿಬ್ಬಂದಿ, ಪೌರಕಾರ್ಮಿಕರು, ಪೊಲೀಸ್ ಸಿಬ್ಬಂದಿ  ಮೇಲೆ ಹೂಮಳೆಗೈದು ಗೌರವ ಸಲ್ಲಿಸಲಾಯಿತು. 

Video Top Stories