Asianet Suvarna News Asianet Suvarna News

ಕೋವಿಡ್ ಆಯ್ತು ಈಗ ಕೃಷಿಯತ್ತ ರೇಣುಕಾಚಾರ್ಯ ಚಿತ್ತ.. ಡ್ರಾಗನ್ ಫ್ರೂಟ್ಸ್ ಬಗ್ಗೆ ಮಾಹಿತಿ ಕೊಟ್ಟ ರೈತನ ಪುತ್ರಿ

ರಾಜಕೀಯ ಬೆಳವಣಿಗೆಗಳ ನಡುವೆಯೇ ಕೋವಿಡ್​ ಸೋಂಕಿತರ ಬೆನ್ನಗಿನಿಂತ ಶಾಸಕರು ಇಂದು (ಮಂಗಳವಾರ) ಕತ್ತಿಗಿ ಗ್ರಾಮದ ರೈತ ಹೊಲದಲ್ಲಿ ಬೆಳೆದ ಡ್ರಾಗನ್ ಪ್ರೂಟ್ಸ್ ತಳಿ ವೀಕ್ಷಣೆ ಮಾಡಿದರು. ಈ ವೇಳೆ ಡ್ರಾಗನ್ ಫ್ರೂಟ್ಸ್ ಬಗ್ಗೆ ರೈತನ ಮಗಳು  ಬಾಲಕಿಯಿಂದ‌ ಶಾಸಕ ಎಂ‌ ಪಿ‌ ರೇಣುಕಾಚಾರ್ಯ ಮಾಹಿತಿ ಪಡೆದರು.

ದಾವಣಗೆರೆ, (ಜುಲೈ.06): ಕೋವಿಡ್​ ಬಿಕ್ಕಟ್ಟಿನ ಕಾಲದಲ್ಲಿ ಸದಾ ಕ್ಷೇತ್ರದ ಜನರ ಜೊತೆ ನಿಂತು ಧೈರ್ಯ ತುಂಬುತ್ತ ಕೊರೋನಾ ವಿರುದ್ಧದ ಹೋರಾಟದಲ್ಲಿ ತಮ್ಮ ಕ್ಷೇತ್ರದ ಜನತೆಗೆ ರಿಯಲ್​ ಹೀರೋ ಎನಿಸಿಕೊಂಡಿದ್ದಾರೆ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ ರೇಣುಕಾಚಾರ್ಯ.

ಬಾಣಸಿಗನಾದ ರೇಣುಕಾಚಾರ್ಯ: ಶಾಸಕರಿಂದ ಸೋಂಕಿತರಿಗೆ ಉಪಹಾರ ನೀಡೋ ಕಾರ್ಯ

ಕೊರೋನಾ ಕಾಲದಿಂದಲೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿರೋ ಶಾಸಕ ರೇಣುಕಾಚಾರ್ಯ ಅವರು, ಸ್ವತಃ ಆಯಂಬುಲೆನ್ಸ್​ ಚಲಾಯಿಸಿದ್ದರು. ರಾಜಕೀಯ ಬೆಳವಣಿಗೆಗಳ ನಡುವೆಯೇ ಕೋವಿಡ್​ ಸೋಂಕಿತರ ಬೆನ್ನಗಿನಿಂತ ಶಾಸಕರು ಇಂದು (ಮಂಗಳವಾರ) ಕತ್ತಿಗಿ ಗ್ರಾಮದ ರೈತ ಹೊಲದಲ್ಲಿ ಬೆಳೆದ ಡ್ರಾಗನ್ ಪ್ರೂಟ್ಸ್ ತಳಿ ವೀಕ್ಷಣೆ ಮಾಡಿದರು. ಈ ವೇಳೆ ಡ್ರಾಗನ್ ಫ್ರೂಟ್ಸ್ ಬಗ್ಗೆ ರೈತನ ಮಗಳು  ಬಾಲಕಿಯಿಂದ‌ ಶಾಸಕ ಎಂ‌ ಪಿ‌ ರೇಣುಕಾಚಾರ್ಯ ಮಾಹಿತಿ ಪಡೆದರು.

ಕತ್ತಿಗಿ ಗ್ರಾಮದ ರೈತ ರಮೇಶ್ ಎಂಬುವರ  22 ಗುಂಟೆ ಹೊಲದಲ್ಲಿ ಡ್ರಾಗನ್ ಪ್ರೂಟ್ಸ್ ಬೆಳೆದಿದ್ದು, ಅದನ್ನು ತೋಟಗಾರಿಕೆ ಇಲಾಖೆ ಅಧಿಕಾರಿ ಜೊತೆ ಕ್ಷೇತ್ರ ವೀಕ್ಷಣೆ ಮಾಡಿದ ಶಾಸಕ ರೇಣುಕಾಚಾರ್ಯ ವೀಕ್ಷಣೆ ಮಾಡಿದರು.