Belagavi| ಮತಾಂತರ ಆರೋಪ, ಹಿಂದೂಪರ ಕಾರ್ಯಕರ್ತರ ಮುತ್ತಿಗೆ
* ಬೆಳಗಾವಿ ನಗರದ ಮರಾಠಾ ಕಾಲೋನಿಯಲ್ಲಿ ನಡೆದ ಘಟನೆ
* ಪಾದ್ರಿಯನ್ನು ತರಾಟೆಗೆ ತೆಗೆದುಕೊಂಡ ಹಿಂದೂ ಕಾರ್ಯಕರ್ತರು
* ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ
ಬೆಳಗಾವಿ(ನ.07): ಮತಾಂತರ(Conversion) ಆರೋಪದ ಹಿನ್ನೆಲೆಯಲ್ಲಿ ಮತಾಂತರ ಮಾಡುತ್ತಿದ್ದ ಕಟ್ಟಡಕ್ಕೆ ಹಿಂದೂಪರ ಕಾರ್ಯಕರ್ತರು ಮುತ್ತಿಗೆ ಹಾಕಿದ ಘಟನೆ ನಗರದಲ್ಲಿ ಇಂದು ನಡೆದಿದೆ. ಬೆಳಗಾವಿ(Belagavi) ನಗರದ ಮರಾಠಾ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಇನ್ನೂರಕ್ಕೂ ಅಧಿಕ ಜನರನ್ನ ಸೇರಿಸಿ ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಮತಾಂತರ ಮಾಡುತ್ತಿದ್ದ ಕಟ್ಟಡಕ್ಕೆ ಹಿಂದೂ ಪರ ಸಂಘಟನೆ(Pro-Hindu organization) ಕಾರ್ಯಕರ್ತರ ಮುತ್ತಿಗೆ ಹಾಕಿದ್ದಾರೆ.
'ಡಿಸಿ ನಡೆ..ಹಳ್ಳಿ ಕಡೆ' ಕಾರ್ಯಕ್ರಮದಲ್ಲಿ 'ನಾವಿರುವುದೇ ನಿಮಗಾಗಿ... ಹಾಡು ಹೇಳಿದ ಡಾ. ಸುಧಾಕರ್..!
ಪ್ರತಿ ಭಾನುವಾರ ಮತಾಂತರ ಮಾಡಿಸಿ ಪ್ರಾರ್ಥನೆ(Prayer) ಮಾಡ್ತಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಪ್ರಾರ್ಥನೆಗೆಂದು ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದಿಂದ ಜನರು ಆಗಮಿಸಿದ್ದರು. ಈ ವೇಳೆ ಪಾದ್ರಿಯನ್ನು ಹಿಂದೂ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ. ಹಿಂದೂ ಕಾರ್ಯಕರ್ತರು ಮುತ್ತಿಗೆ ಹಾಕುತ್ತಿದ್ದಂತೆ ಕೆಲವರು ಎಸ್ಕೇಪ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ಜಮಾವಣೆಗೊಂಡಿದ್ದವರನ್ನ ಕೂಡಿಹಾಕಿ ಪೊಲೀಸರನ್ನ(Police) ಸ್ಥಳಕ್ಕೆ ಕರೆಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ 20ಕ್ಕೂ ಅಧಿಕ ಪೊಲೀಸರಿಂದ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.