Hindu Activist Murder: ನಾವೆಲ್ಲರೂ ಮನುಷ್ಯರಲ್ಲವೇ : ಹಿಂದೂ ಮುಸ್ಲಿಂ ಗಲಾಟೆ ಬೇಡ: ಹರ್ಷ ಸೋದರಿ ಅಶ್ವಿನಿ!

*ಶಿವಮೊಗ್ಗದ ಹರ್ಷ ಮನೆಗೆ ಗಣ್ಯರ ಭೇಟಿ, ಸಾಂತ್ವನ
*ಎಲ್ಲರಿಗೂ ಧನ್ಯವಾದ ಎಂದ ಸೋದರಿ ಆಶ್ವಿನಿ
*ಹಿಂದೂ ಮುಸ್ಲಿಂ ಗಲಾಟೆ ಬೇಡ : ನಾವೆಲ್ಲರೂ ಮನುಷ್ಯರಲ್ಲವೇ

First Published Feb 23, 2022, 2:18 PM IST | Last Updated Feb 23, 2022, 3:14 PM IST

ಶಿವಮೊಗ್ಗ (ಫೆ. 23): . ವೃದ್ದಾಪ್ಯದಲ್ಲಿ ಆಸರೆಯಾಗುತ್ತಾನೆ ಎಂಬ ಭರವಸೆಯಲ್ಲಿದ್ದ ಹರ್ಷನ ಕುಟುಂಬ ಇದೀಗ ಎದೆಯೆತ್ತರದ ಮಗನನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದೆ. ಆಧಾರಸ್ತಂಭವನ್ನೇ ಕಳೆದುಕೊಂಡ ಕುಟುಂಬಕ್ಕೆ ಅನೇಕ ನಾಯಕರು ಭೇಟಿ ನೀಡಿ, ಸಾಂತ್ವನದ ಮೂಲಕ ಧೈರ್ಯ ನೀಡುವ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ಹರ್ಷ್ ಸಹೋದರಿ ಆಶ್ವಿನಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ. ಹಿಂದೂ ಮುಸ್ಲಿಂ ಗಲಾಟೆ ಬೇಡ, ನಾವೆಲ್ಲರೂ ಮನುಷ್ಯರಲ್ಲವೇ, ಶಾಂತಿ-ಸೌಹಾರ್ದತೆಯಿಂದ ಬದುಕೋಣ' ಎಂದು ಆಶ್ವಿನಿ ಹೇಳಿದ್ದಾರೆ.

ಇದನ್ನೂ ಓದಿHindu Activist Murder: ಪೊಲೀಸರು ಎಸಗಿರುವ ಆರೋಪದ ಬಗ್ಗೆಯೂ ತನಿಖೆ: ಗೃಹ ಸಚಿವ ಆರಗ ಜ್ಞಾನೇಂದ್ರ!

ಬಜರಂಗದಳ ಕಾರ್ಯಕರ್ತ ಹರ್ಷ ಬರ್ಬರ ಹತ್ಯೆ ನಂತರ ಎರಡು ದಿನ ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಶಿವಮೊಗ್ಗ ನಗರ ಬಹುತೇಕ ಶಾಂತವಾಗಿದೆ. ಸೀಗೆಹಟ್ಟಿಬಳಿ ಹರ್ಷನನ್ನು ಬರ್ಬರವಾಗಿ ಹತ್ಯೆ ಮಾಡಿದ ಸುದ್ದಿ ತಿಳಿಯುತ್ತಿದ್ದಂತೆ ಭಾನುವಾರ ರಾತ್ರಿ ಮೆಗ್ಗಾನ್‌ ಆಸ್ಪತ್ರೆ ಮುಂದೆ ಸೇರಿದ್ದ ಜನ ದಾಂಧಲೆ ನಡೆಸಿ ಒಂದೆರಡು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಆ ಬಳಿಕ ಸೋಮವಾರ ಹರ್ಷನ ಮೃತದೇಹದ ಅಂತಿಮಯಾತ್ರೆ ವೇಳೆಯೂ ನಗರದ ಅನೇಕ ಕಡೆ ಕಲ್ಲುತೂರಾಟ, ವಾಹನಗಳು, ಅಂಗಡಿಗಳಿಗೆ ಬೆಂಕಿ ಹಚ್ಚಿದ ಘಟನೆಗಳು ನಡೆದಿದ್ದವು. ಘಟನೆಯಲ್ಲಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಲ್ಲದೆ, 10ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾಗಿದ್ದವು. 

Video Top Stories