ಕಲ್ಲು ಹೊಡೆದುಕೊಂಡು ಇದ್ದೋರನ್ನ ಲೋಕಸಭೆಗೆ ಕಳುಹಿಸಿದ್ರೆ ಇನ್ನೇನಾಗುತ್ತೆ? ಡಿಕೆಸುಗೆ ಹೆಚ್‌ಡಿಕೆ ಟಾಂಗ್‌

ಕಲ್ಲು ಹೊಡೆದುಕೊಂಡು ಇದ್ದೋರನ್ನ ಲೋಕಸಭೆಗೆ ಕಳುಹಿಸಿದ್ರೆ ಇನ್ನೇನಾಗುತ್ತೆ. ಇಲ್ಲಿ ಬಡ ಜನರನ್ನ ಲೂಟಿ ಮಾಡಿಕೊಂಡು ಸಾಕ್ಷಿಗುಡ್ಡೆ ಮಾಡಿದ್ದಾರೆ ಎಂದು  ಡಿ.ಕೆ.ಸುರೇಶ್‌ಗೆ ಮಾಜಿ ಸಿಎಂ ಹೆಚ್‌ಡಿಕೆ ಟಾಂಗ್ ನೀಡಿದ್ದಾರೆ.
 

First Published Feb 2, 2024, 3:06 PM IST | Last Updated Feb 2, 2024, 3:06 PM IST

ರಾಮನಗರ: ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡಿದ ಸಂಸದ ಡಿ.ಕೆ‌‌‌.ಸುರೇಶ್‌ಗೆ(DK Suresh) ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ(HD Kumaraswamy) ತಿರುಗೇಟು ನೀಡಿದ್ದಾರೆ. ಕೇಂದ್ರ ಸರ್ಕಾರ ಆರ್ಥಿಕ ತಾರತಮ್ಯ ಮಾಡುತ್ತಿದ್ದು, ಕರ್ನಾಟಕಕ್ಕೆ(Karnataka) ಅನ್ಯಾಯವಾಗುತ್ತಿದೆ ಎಂದಿದ್ದಾರೆ. ಇದು ಇನ್‌ಮೆಚ್ಯೂರ್ ಸ್ಟೇಟ್ ಮೆಂಟ್‌. ರಾಜ್ಯದಲ್ಲಿ ಬಿರಿಯಾನಿ ಊಟ ಮಾಡಿ, ಭಾರತ್ ಜೋಡೋ ಮಾಡಿದ್ರು. ಈಗ ವಿಭಜನೆ ಮಾತನಾಡ್ತಿದ್ದಾರೆ. ಒಂದುವೇಳೆ ವಿಭಜನೆ ಆಯ್ತು ಅಂತ ತಿಳಿದುಕೊಳ್ಳಿ. ತಮಿಳುನಾಡಿನಿಂದ ಕಾವೇರಿ ವಿಚಾರದಲ್ಲಿ ನ್ಯಾಯ ಪಡೆಯಲು ಸಾಧ್ಯವೇ? 174ಕೋಟಿ ದೇಶದ ಮೊದಲನೇ ಬಜೆಟ್(Budget).ಆಗ ದೇಶದಲ್ಲಿ ಆಹಾರದ ಕೊರತೆ ಇತ್ತು. ಆಗಿನಿಂದಲೂ ಸರ್ಕಾರಗಳು ಬಜೆಟ್ ಮಂಡಿಸಿಕೊಂಡು ಬಂದಿವೆ. ನಾವು ಫೈನಾನ್ಸ್ ಕಮಿಷನ್‌ಗಳನ್ನ ಮಾಡಿಕೊಂಡಿದ್ದೇವೆ. ಅವರು ಎಲ್ಲಾ ರಾಜ್ಯಕ್ಕೂ ಭೇಟಿಕೊಟ್ಟು ಪರಿಶೀಲನೆ ಮಾಡ್ತಾರೆ. ಯಾವ ರಾಜ್ಯಕ್ಕೆ ಎಷ್ಟು ಹಣಬೇಕು ಅನ್ನೋ ವರದಿ ಕೊಡ್ತಾರೆ. ಯಾವ ರಾಜ್ಯ ಅಭಿವೃದ್ಧಿ ಆಗಿಲ್ಲ, ಯಾವ ರಾಜ್ಯ ಅಭಿವೃದ್ಧಿ ಆಗಿದೆ ಅದನ್ನ ನೋಡಿ ಹಣ ಹಂಚುತ್ತಾರೆ. ಈ ಹಂಚಿಕೆಯನ್ನ ಕಾಂಗ್ರೆಸ್ ಇದ್ದಾಗಲೇ ಪ್ರಾರಂಭ ಮಾಡಿದ್ದು‌. ಮೋದಿ ಬಂದು ಇದನ್ನ ಪ್ರಾರಂಭ ಮಾಡಿಲ್ಲ. ಕಲ್ಲು ಹೊಡೆದುಕೊಂಡು ಇದ್ದೋರನ್ನ ಲೋಕಸಭೆಗೆ ಕಳುಹಿಸಿದ್ರೆ ಇನ್ನೇನಾಗುತ್ತೆ. ಇಲ್ಲಿ ಬಡ ಜನರನ್ನ ಲೂಟಿ ಮಾಡಿಕೊಂಡು ಸಾಕ್ಷಿಗುಡ್ಡೆ ಮಾಡಿದ್ದಾರೆ. ಅಂತವರನ್ನ ತೆಗೆದುಕೊಂಡು ಹೋಗಿ ದೇಶ ಕಟ್ಟು ಅಂತ ಕಳುಹಿಸಿದ್ರೆ ಕಟ್ತಾರಾ..? ಅವರ ಸಾಮ್ರಾಜ್ಯ ಕಟ್ಟುಕೊಳ್ತಾರೆ ಅಷ್ಟೇ. ಇವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಸಂಸದ ಡಿ.ಕೆ.ಸುರೇಶ್‌ಗೆ ಮಾಜಿ ಸಿಎಂ ಹೆಚ್‌ಡಿಕೆ ಟಾಂಗ್ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  KS Eshwarappa: ಡಿ.ಕೆ. ಸುರೇಶ್‌ ರಸ್ತೆಯಲ್ಲಿ ಹೋಗುವ ದಾಸಪ್ಪನಂತೆ ಮಾತನಾಡಿದ್ರೆ ಹೇಗೆ? ಕೆ.ಎಸ್‌.ಈಶ್ವರಪ್ಪ

Video Top Stories