ಲಾಕ್‌ಡೌನ್ ಬ್ರೇಕ್ ಮಾಡಿದ್ರೆ ಹುಷಾರ್: ನಡು ರಸ್ತೆಯಲ್ಲೇ ಸಿಗುತ್ತೆ ಕಪ್ಪೆ ಜಿಗಿತ ಶಿಕ್ಷೆ
ಲಾಕ್‌ಡೌನ್ ನಿಯಮ ಬ್ರೇಕ್ ಮಾಡಿದರೆ ಸಿಗುತ್ತೆ ನಡುರಸ್ತೆಯಲ್ಲಿ ಕಪ್ಪೆ ಜಿಗಿತದ ಶಿಕ್ಷೆ| ಮನೆ ಬಿಟ್ಟು ಹೊರಗಡೆ ಬಂದ ಜನರಿಗೆ ಕಪ್ಪೆ ಜಿಗಿತದ ಶಿಕ್ಷೆ ನೀಡಿದ ಪೊಲೀಸರು| ಲಾಕ್‌ಡೌನ್ ಮಾಡಿದರೂ ತಲೆನೇ ಕೆಡಿಸಿಕೊಳ್ಳದ ಜನರು|
ಬೆಂಗಳೂರು(ಜು.19): ಲಾಕ್‌ಡೌನ್ ನಿಯಮ ಬ್ರೇಕ್ ಮಾಡಿದರೆ ಸಿಗುತ್ತೆ ನಡುರಸ್ತೆಯಲ್ಲಿ ಕಪ್ಪೆ ಜಿಗಿತದ ಶಿಕ್ಷೆ. ಹೌದು, ಸುಮ್ನೆ ಸುಮ್ನೆ ಮನೆ ಬಿಟ್ಟು ಹೊರಗಡೆ ಬಂದ ಜನರಿಗೆ ಪೊಲೀಸರು ಕಪ್ಪೆ ಜಿಗಿತದ ಶಿಕ್ಷೆಯನ್ನ ನೀಡಿದ ಘಟನೆ ನಗರದಲ್ಲಿ ನಡೆದಿದೆ.
ಸಿಎಂ ಆದೇಶಕ್ಕೂ ಡೋಂಟ್ ಕೇರ್; ಪೌರ ಕಾರ್ಮಿಕನಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆ ನಕಾರ
ಬೆಂಗಳೂರಿನ ರಾಜಗೋಪಾಲ ನಗರದ ಪೊಲೀಸರು ಮನೆ ಬಿಟ್ಟು ಹೊರಗಡೆ ಬಂದ ಜನರಿಗೆ ವಿನೂತನವಾಗಿ ಶಿಕ್ಷೆ ಕೊಟ್ಟಿದ್ದಾರೆ. ಕೊರೋನಾ ವೈರಸ್ ಕಟ್ಟಿ ಹಾಕಲು ಮನೆಯಲ್ಲಿಯೇ ಇರಿ ಎಂದು ಸರ್ಕಾರ ಲಾಕ್‌ಡೌನ್ ಮಾಡಿದರೂ ಜನರು ಮಾತ್ರ ತಲೆನೇ ಕೆಡಿಸಿಕೊಳ್ಳುತ್ತಿಲ್ಲ.