ಉಚಿತ ಹೆಲ್ಮೆಟ್ ಪಡೆಯಲು ಮುಗಿಬಿದ್ದ ಜನ, ಕೊನೆಗೆ ವಿತರಣೆಗೆ ಬಿತ್ತು ಬ್ರೇಕ್!
ಸಂಜೀವಿನಿ ಟ್ರಸ್ಟ್‌ನಿಂದ ಬೈಕ್ ಸವಾರರಿಗೆ ಉಚಿತ ಹೆಲ್ಮೆಟ್ ವಿತರಣೆ ಕಾರ್ಯಕ್ರಮ ನಡೆಯಿತು. ಹೆಲ್ಮೆಟ್ ಹಾಕಿರುವ ಸವಾರರಿಗೆ ಹೂ ನೀಡಿ ಎ.ಎಸ್.ಪಿ ಲಾವಣ್ಯ ಶುಭ ಕೋರಿದರು. ಬಳಿಕ ಹೆಲ್ಮೆಟ್ ಹಾಕದ ಸವಾರರಿಗೆ ಉಚಿತ ಹೆಲ್ಮೆಟ್ ಕೊಡುವ ಕಾರ್ಯಕ್ರಮ ಶುರುವಾಯಿತು.
ಬಳ್ಳಾರಿ (ಫೆ. 08): ಸಂಜೀವಿನಿ ಟ್ರಸ್ಟ್‌ನಿಂದ ಬೈಕ್ ಸವಾರರಿಗೆ ಉಚಿತ ಹೆಲ್ಮೆಟ್ ವಿತರಣೆ ಕಾರ್ಯಕ್ರಮ ನಡೆಯಿತು. ಹೆಲ್ಮೆಟ್ ಹಾಕಿರುವ ಸವಾರರಿಗೆ ಹೂ ನೀಡಿ ಎ.ಎಸ್.ಪಿ ಲಾವಣ್ಯ ಶುಭ ಕೋರಿದರು. ಬಳಿಕ ಹೆಲ್ಮೆಟ್ ಹಾಕದ ಸವಾರರಿಗೆ ಉಚಿತ ಹೆಲ್ಮೆಟ್ ಕೊಡುವ ಕಾರ್ಯಕ್ರಮ ಶುರುವಾಯಿತು. ಮೂರ್ನಾಲ್ಕು ಜನರಿಗೆ ಹೆಲ್ಮೆಟ್ ವಿತರಣೆ ಮಾಡುತ್ತಿದ್ದಂತೆ ತಾವೂ ಹೆಲ್ಮೇಟ್ ತೆಗೆದುಕೊಳ್ಳಲು ಜನ ಮುಗಿಬಿದ್ದರು.
ಪ್ರತಿಭಟನೆ ಬಿಡಿ, ಮಾತುಕತೆಗೆ ಬನ್ನಿ, ನಾವು ಸಿದ್ಧರಿದ್ದೇವೆ; ರೈತರ ಮನವೊಲಿಕೆಗೆ ಮುಂದಾದ 'ನಮೋ'
ಕೆಲ ಕಾಲ ರಾಯಲ್ ವೃತ್ತದಲ್ಲಿ ಟ್ರಾಫಿಕ್ ಜಾಮ್ ಆಗಿ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಹೆಚ್ಚಿನ ಸಂಖ್ಯೆಯಲ್ಲಿ ಜನ ಮುಗಿಬಿದ್ದಿದ್ದರಿಂದ ಉಚಿತ ಹೆಲ್ಮೆಟ್ ವಿತರಣೆಗೆ ಬ್ರೇಕ್ ನೀಡಲಾಯ್ತು..! ಉಚಿತವಾಗಿ ಕೊಡ್ತಾರೆ ಅಂದರೆ ನಮ್ಮ ಜನ ಮುಗಿಬೀಳೋದು ಸಹಜ ಬಿಡಿ..!