ಪ್ರತಿಭಟನೆ ಬಿಡಿ, ಮಾತುಕತೆಗೆ ಬನ್ನಿ, ನಾವು ಸಿದ್ಧರಿದ್ದೇವೆ; ರೈತರ ಮನವೊಲಿಕೆಗೆ ಮುಂದಾದ 'ನಮೋ'

ರಾಜ್ಯಸಭೆಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಸುದೀರ್ಘವಾಗಿ ಮಾತನಾಡಿದ್ದಾರೆ. ಕೃಷಿಕಾಯ್ದೆ ಬಗ್ಗೆ ರೈತರ ಹೋರಾಟ, ಸಾಲಮನ್ನಾ ವಿಚಾರವಾಗಿ ಮಾತನಾಡಿದ್ದಾರೆ.  ಕೃಷಿಕಾಯ್ದೆಯನ್ನು ಸಮೃದ್ಧಗೊಳಿಸಲು ಇದು ಸೂಕ್ತವಾದ ಸಮಯ. ಈ ಕಾಲ ಹೋದರೆ ಮತ್ತೆ ಸಿಗುವುದಿಲ್ಲ ಎಂದಿದ್ಧಾರೆ. 

First Published Feb 8, 2021, 2:11 PM IST | Last Updated Feb 8, 2021, 2:12 PM IST

ಬೆಂಗಳೂರು (ಫೆ. 08): ರಾಜ್ಯಸಭೆಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಸುದೀರ್ಘವಾಗಿ ಮಾತನಾಡಿದ್ದಾರೆ. ಕೃಷಿಕಾಯ್ದೆ ಬಗ್ಗೆ ರೈತರ ಹೋರಾಟ, ಸಾಲಮನ್ನಾ ವಿಚಾರವಾಗಿ ಮಾತನಾಡಿದ್ದಾರೆ.  ಕೃಷಿಕಾಯ್ದೆಯನ್ನು ಸಮೃದ್ಧಗೊಳಿಸಲು ಇದು ಸೂಕ್ತವಾದ ಸಮಯ. ಈ ಕಾಲ ಹೋದರೆ ಮತ್ತೆ ಸಿಗುವುದಿಲ್ಲ. MSP ಇತ್ತು, ಇದೆ ಮುಂದೆಯೂ ಕೂಡಾ ಇರುತ್ತದೆ.  ಕೃಷಿಕಾಯ್ದೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ. ಕಾಯ್ದೆ ತಿದ್ದುಪಡಿಗೆ , ಮಾತುಕತೆಗೆ ಸರ್ಕಾರ ಸಿದ್ಧವಿದೆ' ಎಂದು ಸ್ಪಷ್ಟಪಡಿಸಿದ್ದಾರೆ. 

ಪಂಜಾಬ್‌ನ ರೊಟ್ಟಿ ತಿನ್ನುವ ಸೌಭಾಗ್ಯ ನನಗೆ ಸಿಕ್ಕಿದೆ: ಸಿಖ್ಖರ ಮನವೊಲಿಕೆಗೆ ಮೋದಿ ಯತ್ನ!

ಈ ದೇಶಕ್ಕೆ ಸಿಖ್ಖರ ಕೊಡುಗೆ ಬಗ್ಗೆ ನಮಗೆ ಗೌರವವಿದೆ. ವಿದೇಶಿ ಶಕ್ತಿಗಳು ಸಿಖ್ಖರ ತಲೆಯಲ್ಲಿ ಏನೇನೋ ತುಂಬುತ್ತಿವೆ. ಅದಕ್ಕೆ ಜಾಗ ಕೊಡಬಾರದು ಎಂದಿದ್ದಾರೆ. ಇನ್ನು ಸಾಲಮನ್ನಾ ವಿಚಾರವಾಗಿ, ಸಾಲಮನ್ನಾದಿಂದ ಏನೂ ಉಪಯೋಗವಿಲ್ಲ' ಎಂದು ಹೇಳಿದ್ದಾರೆ. ಮೋದಿ ಮಾತಿನ ವಿಮರ್ಶೆ ಹೀಗಿದೆ.