ಹಾಸನದಲ್ಲಿ ಹೊಸದಾಗಿ ನಾಲ್ವರಿಗೆ ಕೊರೋನಾ ಸೋಂಕು ಪತ್ತೆ..!

ಉಸ್ತುವಾರಿ ಸಚಿವರ ಸಭೆಯಲ್ಲಿ ಹಾಸನ ಜಿಲ್ಲಾಧಿಕಾರಿ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಆರಂಭದಲ್ಲೇ ಕೊರೋನಾ ಬಿಸಿ ಹಾಸನಕ್ಕೆ ತಾಗಿರಲಿಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. 

First Published May 15, 2020, 5:52 PM IST | Last Updated May 15, 2020, 5:52 PM IST

ಹಾಸನ(ಮೇ.15): ಹಾಸನದ ಪಾಲಿಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ಹೊಸದಾಗಿ 4 ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಬೆಳಗ್ಗೆ ಮೂರು ಹಾಗೂ ಮದ್ಯಾಹ್ನ 4 ಸೇರಿ ಒಟ್ಟು ಒಂದೇ ದಿನ 7 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.

ಉಸ್ತುವಾರಿ ಸಚಿವರ ಸಭೆಯಲ್ಲಿ ಹಾಸನ ಜಿಲ್ಲಾಧಿಕಾರಿ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಆರಂಭದಲ್ಲೇ ಕೊರೋನಾ ಬಿಸಿ ಹಾಸನಕ್ಕೆ ತಾಗಿರಲಿಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ದಾವಣಗೆರೆಯ ನಿದ್ದೆಗೆಡಿಸಿದ ಬೆಳ್ಳುಳ್ಳಿ ವ್ಯಾಪಾರಿ..! 

ಹೊಸದಾಗಿ 7 ಕೊರೋನಾ ಪ್ರಕರಣ ಸೇರಿದಂತೆ ಹಾಸನದಲ್ಲಿ ಕೊರೋನಾ ಪೀಡಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.