ಬಾಗಲಕೋಟೆ: ನೇಕಾರರ ದಿನಸಿ ಕಿಟ್ ಖರೀದಿ ಟೆಂಡರ್‌ನಲ್ಲಿ ಗೋಲ್‌ಮಾಲ್
ರಬಕವಿ-ಬನಹಟ್ಟಿ ನಗರಸಭೆಯ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಮಾಜಿ ಸಚಿವೆ ಉಮಾಶ್ರೀ|ಕೇಸ್ ಹಾಸಿಕೊಳ್ಳೋರು ನೀವೆ, ಜೈಲಿಗೆ ಹೋಗೋರು ನೀವೆ ಎಂದು ಜನಪ್ರತಿನಿಧಿಗಳ ಮಾತು ಕೇಳಿ ಅವ್ಯವಹಾರ ಮಾಡಿದರೆ ಸಸ್ಪೆಂಡ್ ಅಗುತ್ತೀರಿ ಎಂದ ಮಾಜಿ ಸಚಿವೆ|
ಬಾಗಲಕೋಟೆ(ಜೂ.10): ನೇಕಾರರಿಗಾಗಿ ಖರೀದಿ ಮಾಡಿರುವ ದಿನಸಿ ಕಿಟ್ ಟೆಂಡರ್‌ನಲ್ಲಿ ಅವ್ಯವಹಾರ ನಡೆದಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಅವರು ಗಂಭೀರವಾದ ಆರೋಪವೊಂದನ್ನ ಮಾಡಿದ್ದಾರೆ. ಜಿಲ್ಲೆಯ ರಬಕವಿ-ಬನಹಟ್ಟಿ ನಗರಸಭೆಯ ಕಚೇರಿಯಲ್ಲಿ ಅಧಿಕಾರಿಗಳನ್ನ ಉಮಾಶ್ರೀ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಯಾದಗಿರಿ: ಆರೋಗ್ಯ ಸಚಿವರೇ ಇಲ್ನೋಡಿ, ಇದು ಮನುಷ್ಯರು ತಿನ್ನೋ ಊಟಾನಾ..?
ಕೇಸ್ ಹಾಸಿಕೊಳ್ಳೋರು ನೀವೆ, ಜೈಲಿಗೆ ಹೋಗೋರು ನೀವೆ ಎಂದು ಜನಪ್ರತಿನಿಧಿಗಳ ಮಾತು ಕೇಳಿ ಅವ್ಯವಹಾರ ಮಾಡಿದರೆ ಸಸ್ಪೆಂಡ್ ಅಗುತ್ತೀರಿ ಎಂದು ನಗರಸಭೆ ಅಯುಕ್ತರು ಹಾಗೂ ಎಇಇಯನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.