ರಾತ್ರಿ ಅವಧಿಗೂ ಮೀರಿ ಪಬ್ ತೆರೆದಿದ್ದ ಹಿನ್ನಲೆ: ಕೊಹ್ಲಿ ಮಾಲೀಕತ್ವದ ಪಬ್ ಮೇಲೆ ಎಫ್ಐಆರ್‌ ದಾಖಲು

ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ಕೊಹ್ಲಿ ಮಾಲೀಕತ್ವದ ಪಬ್ ಮೇಲೆ ಎಫ್ಐಆರ್‌ ದಾಖಲು ಮಾಡಲಾಗಿದೆ.
 

First Published Jul 9, 2024, 11:58 AM IST | Last Updated Jul 9, 2024, 11:58 AM IST

ರಾತ್ರಿ ಅವಧಿ ಮೀರಿ ಪಬ್ ಓಪನ್ ಮಾಡಿದ ಹಿನ್ನೆಲೆ ಕೊಹ್ಲಿ(Kohli) ಮಾಲೀಕತ್ವದ ಪಬ್(Pub) ಮೇಲೆ ಎಫ್ಐಆರ್‌(FIR) ದಾಖಲು ಮಾಡಲಾಗಿದೆ. ಕೊಹ್ಲಿ ಮಾಲೀಕತ್ವದ ಒನ್ 8 ಕಮ್ಯೂನ್ ಪಬ್ ಮೇಲೆ ಎಫ್‌ಐಆರ್‌ ದಾಖಲು ಮಾಡಿದ್ದು, ಇದು ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿದೆ(Bengaluru Kasturaba Road). ಕಬ್ಬನ್ ಪಾರ್ಕ್ ಠಾಣೆಯಲ್ಲಿ FIR ದಾಖಲಾಗಿದೆ. ಜುಲೈ‌ 6 ರಂದು 1.20ವರೆಗೆ ಪಬ್‌ ಓಪನ್ ಇತ್ತು ಎಂದು ತಿಳಿದುಬಂದಿದೆ. ರಾತ್ರಿ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಪಬ್ ಓಪನ್ ಇರೋದಾಗಿ ಮಾಹಿತಿ ಬಂದಿದೆ. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಗ್ರಾಹಕರಿದ್ದರು. ಅವಧಿಗೂ ಮೀರಿ ಅನಧಿಕೃತವಾಗಿ ಪಬ್ ಓಪನ್ ಮಾಡಿದ ಹಿನ್ನಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 

ಇದನ್ನೂ ವೀಕ್ಷಿಸಿ:  ಮೇಲ್ಮನೆ ವಿಪಕ್ಷ ನಾಯಕನ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ.. ಒಟ್ಟು ಮೂರು ಹೆಸರು..ಯಾರಿಗೆ ಅವಕಾಶ ?