Asianet Suvarna News Asianet Suvarna News

ಕ್ವಾರಂಟೈನ್‌ ಕೇಂದ್ರದಲ್ಲಿ ನೀರಿಗಾಗಿ ಕಲ್ಲಿನಿಂದ ಹೊಡೆದಾಡಿಕೊಂಡ ನಾರಿಯರು.!

ಕ್ವಾರಂಟೈನ್‌ ಕೇಂದ್ರದಲ್ಲಿ ಬೋರವೆಲ್‌ ನೀರಿಗಾಗಿ ಮಹಿಳೆಯರ ಜಗಳ| ಯಾದಗಿರಿಯಲ್ಲಿ ನಡೆದ ಘಟನೆ| ಕ್ವಾರಂಟೈನ್‌ ಉದ್ದೇಶವನ್ನೇ ಮರೆತ ವಲಸೆ ಕಾರ್ಮಿಕರು| ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್‌ ಆದ ಕಾರ್ಮಿಕರು|

ಯಾದಗಿರಿ(ಮೇ.29): ನೀರಿಗಾಗಿ ಮಹಿಳೆಯರು ಹೊಡೆದಾಡಿಕೊಂಡ ಘಟನೆ ಯಾದಗಿರಿಯಲ್ಲಿ ಇಂದು(ಶುಕ್ರವಾರ) ನಡೆದಿದೆ. ಕ್ವಾರಂಟೈನ್‌ ಕೇಂದ್ರದಲ್ಲಿ ಬೋರವೆಲ್‌ ನೀರಿಗಾಗಿ ಮಹಿಳೆಯರು ಕಲ್ಲಿನಿಂದ ಬಡಿದಾಡಿಕೊಂಡಿದ್ದಾರೆ. ಇವರೆಲ್ಲ ವಲಸೆ ಕಾರ್ಮಿಕರಾಗಿದ್ದು, ಇವರನ್ನ ಕ್ವಾರಂಟೈನ್‌ ಕೇಂದ್ರದಲ್ಲಿ ಇಡಲಾಗಿದೆ. 

1200 ಕಿ.ಮೀ. ಸೈಕಲ್‌ ಸವಾರಿ: ಜ್ಯೋತಿ ಕುಮಾರಿಗೆ ಮ್ಯಾನ್‌ಕೈಂಡ್‌ನಿಂದ 1 ಲಕ್ಷ ರೂ.ನೆರವು

ನನಗೆ ಫಸ್ಟ್‌ ನೀರು, ನನಗೆ ಫಸ್ಟ್‌ ನೀರು ಎಂದು ಮಹಿಳೆಯರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ವಲಸೆ ಕಾರ್ಮಿಕರು ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್‌ ಆಗಿದ್ದಾರೆ. ಕ್ವಾರಂಟೈನ್‌ ಉದ್ದೇಶವನ್ನ ಮರೆತು ಜಗಳವಾಡಿದ್ದಾರೆ. ಇವರಲ್ಲಿ ಯಾರಿಗಾದರೂ ಕೊರೋನಾ ವೈರಸ್ ಇದ್ದರೆ ಯಾವೆಲ್ಲ ಅನಾಹುತ ಕಾದಿಯೋ?, ಇದಕ್ಕೆಲ್ಲಾ ಕಾಲವೇ ಉತ್ತರಿಸಲಿದೆ. 
 

Video Top Stories