Asianet Suvarna News Asianet Suvarna News

1200 ಕಿ.ಮೀ. ಸೈಕಲ್‌ ಸವಾರಿ: ಜ್ಯೋತಿ ಕುಮಾರಿಗೆ ಮ್ಯಾನ್‌ಕೈಂಡ್‌ನಿಂದ 1 ಲಕ್ಷ ರೂ.ನೆರವು

ಜ್ಯೋತಿ ಕುಮಾರಿಗೆ ಮ್ಯಾನ್‌ಕೈಂಡ್‌ ಫಾರ್ಮಾ ಕಂಪನಿಯಿಂದ 1 ಲಕ್ಷ ರೂ. ನೆರವು| 8 ದಿನಗಳ ಕಾಲ ಅನಾರೋಗ್ಯ ಪೀಡಿತ ತಂದೆಯನ್ನ ಸೈಕಲ್‌ನಲ್ಲಿ ತನ್ನ ಸ್ವಗ್ರಾಮಕ್ಕೆ ಕರೆತಂದಿದ್ದ ಜ್ಯೋತಿ ಕುಮಾರಿ|ಜ್ಯೋತಿ ಕುಮಾರಿ ಸಾಧನೆಗೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿತ್ತು|

First Published May 29, 2020, 12:37 PM IST | Last Updated May 29, 2020, 12:37 PM IST

ಬೆಂಗಳೂರು(ಮೇ.29): ಅನಾರೋಗ್ಯ ಪೀಡಿತ ತಂದೆಯನ್ನ ಸುಮಾರು 1200 ಕಿಮಿ ಸೈಕಲ್‌ನಲ್ಲೇ ಕರೆ ತಂದಿದ್ದ ಬಿಹಾರದ 15 ವರ್ಷದ ಜ್ಯೋತಿ ಕುಮಾರಿಗೆ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಇದೀಗ ಬಾಲಕಿಗೆ ಭಾರತದ ಪ್ರಸಿದ್ಧ ಔಷಧ ತಯಾರಿಕಾ ಕಂಪನಿ ಮ್ಯಾನ್‌ಕೈಂಡ್‌ ಫಾರ್ಮಾ 1 ಲಕ್ಷ ರೂ. ನೆರವು ನೀಡಿದೆ. 

ರಾಜ್ಯ ಬಿಜೆಪಿಯಲ್ಲಿ ಭಿನ್ನಮತ: ಇದು ಹೈಕಮಾಂಡ್‌ ಲೆಕ್ಕಾಚಾರ!

ಸುಮಾರು 8 ದಿನಗಳ ಕಾಲ ಅನಾರೋಗ್ಯ ಪೀಡಿತ ತಂದೆಯನ್ನ ಸೈಕಲ್‌ನಲ್ಲಿ ತನ್ನ ಸ್ವಗ್ರಾಮಕ್ಕೆ ಕರೆತಂದಿದ್ದಳು. ಜ್ಯೋತಿ ಕುಮಾರಿ ಸಾಧನೆಗೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ಜ್ಯೋತಿ ಕುಮಾರಿಗೆ 1 ಲಕ್ಷ ರೂ. ನೆರವು ನೀಡಿದ ಮ್ಯಾನ್‌ಕೈಂಡ್‌ ಫಾರ್ಮಾ ಕಂಪನಿಯ ಕಾರ್ಯ ಶ್ಲಾಘನೀಯವಾಗಿದೆ. 
 

Video Top Stories