ಧಾರವಾಡ: ಚಿರತೆ ಕಾಟಕ್ಕೆ ಬೇಸತ್ತ ಅನ್ನದಾತ
* ಚಿರತೆ ಕಾಟಕ್ಕೆ ಬೇಸತ್ತ ರೈತರು, ಕೆಲಸಕ್ಕೆ ಬಾರದ ಕೂಲಿ ಆಳುಗಳು
* ಕಬ್ಬಿನ ಹೊಲಗಳಿಗೆ ನೀರುಣಿಸಲು ಆಗದೆ ಸಮಸ್ಯೆ ಎದುರಿಸುತ್ತಿರುವ ರೈತರು
* ಕಳೆದ ಕೆಲ ದಿನಗಳಿಂದ ನಿದ್ದೆಗೆಡಿಸಿದ ಚಿರತೆ ಹಿಡಿಯಲು ಹರಸಾಹಸ
ಧಾರವಾಡ(ಸೆ.25): ಕಳೆದ ನಾಲ್ಕು ದಿನದಿಂದ ನಿದ್ದೆ ಗೆಡಸಿದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹರಸಾಹಸವನ್ನ ಪಡುತ್ತಿದ್ದಾರೆ. ಧಾರವಾಡ ತಾಲೂಕಿನ ಕವಲಗೇರಿ, ಗೋವನಕೊಪ್ಪ ಗ್ರಾಮದಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು, ಕಳೆದ ನಾಲ್ಕು ದಿನಗಳಿಂದ ಚಿರತೆ ನಿದ್ದೆಗೆಡಿಸಿದೆ. ಚಿರತೆ ಹಿಡಿಯಲು ಹಗಲು ರಾತ್ರಿ ಎನ್ನದೆ 50 ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೀಡು ಬಿಟ್ಟಿದ್ದಾರೆ ಚಿರತೆ ಕಾಟಕ್ಕೆ ಅಕ್ಕಪಕ್ಕದ ರೈತರಿಗೆ ತೊಂದರೆಯಾಗಿದ್ದು ಕೂಲಿ ಕೆಲಸಕ್ಕೆ ಆಳುಗಳು ಬರುತ್ತಿಲ್ಲ, ಕಬ್ಬಿನ ಹೊಲಗಳಿಗೆ ನೀರುಣಿಸಲಿ ಆಗದೆ ಸಮಸ್ಯೆಯನ್ನ ರೈತರು ಅನುಭವಿಸುತ್ತಿದ್ದಾರೆ.
ಕರ್ನಾಟಕದಲ್ಲಿ ಕೊರೋನಾ ನಿಯಮ ಸಡಿಲಿಕೆ; ಲಸಿಕೆ ಶೇ.80 ರಷ್ಟು ಸುರಕ್ಷಿತ, BBMP ವರದಿ!