Asianet Suvarna News Asianet Suvarna News

ಎಲ್ಲಿ ನೋವಿದೆಯೋ ಅಲ್ಲಿಗೇ ಇಂಜೆಕ್ಷನ್, ಸಂಡೇ ಮಾತ್ರ ಸರ್ವಿಸ್! ಇವರು ಅಂತಿಂಥ ಡಾಕ್ಟ್ರಮ್ಮ ಅಲ್ಲ!

- ಏಕ್ ದಿನ್ ಕಾ ಲೇಡಿ ಎಂಬಿಬಿಎಸ್! ಬರೀ ಭಾನುವಾರ ಮಾತ್ರ ಈ ಮೇಡಮ್ ಟ್ರೀಟ್ಮೆಂಟ್! 

- ಒಂದು ಸಣ್ಣ ರೂಮ್‌ನಲ್ಲಿ ಮಂಡಿ ನೋವು ಸೊಂಟ ನೋವುಗಳಿಗೆ ಕೊಡ್ತಾರೆ ಇಂಜೆಕ್ಷನ್!

- ನಿಮಗೆ ಎಲ್ಲಿ ನೋವು ಇದೇಯೋ ಅದೇ ಜಾಗದಲ್ಲಿ ಹಾಕ್ತಾರೆ ಇಂಜೆಕ್ಷನ್!

 

Sep 27, 2021, 2:51 PM IST

ಯಾದಗಿರಿ (ಸೆ. 27): ಏಕ್ ದಿನ್ ಕಾ ಲೇಡಿ ಎಂಬಿಬಿಎಸ್! ಬರೀ ಭಾನುವಾರ ಮಾತ್ರ ಈ ಮೇಡಮ್ ಟ್ರೀಟ್ಮೆಂಟ್! ಅರೇ, ಏನ್ರಿ ಇದು ಅಂತೀರಾ..? ಹೌದ್ರಿ. ಒಂದು ಸಣ್ಣ ರೂಮ್‌ನಲ್ಲಿ ಮಂಡಿ ನೋವು, ಸೊಂಟ ನೋವುಗಳಿಗೆ ಈಕೆ ಇಂಜೆಕ್ಷನ್ ಕೊಡ್ತಾರೆ.  

ಧಾರವಾಡ: ಜೀವಭಯದಲ್ಲೇ ದಿನದೂಡುತ್ತಿವೆ ಪೊಲೀಸ್ ಕುಟುಂಬಗಳು, ಗೃಹ ಸಚಿವರೇ ಗಮನಿಸಿ

ನಿಮಗೆ ಎಲ್ಲಿ ನೋವು ಇದೇಯೋ ಅದೇ ಜಾಗದಲ್ಲಿ ಇಂಜೆಕ್ಷನ್ ಹಾಕ್ತಾರೆ. ವಯಸ್ಸಾದ ಸಹಾಯಕ ಸಿರಿಂಜ್‌ಗೆ ಔಷಧ ಹಾಕ್ತಾನೆ, ಈಕೆ ಎಲ್ಲಿ ನೋವಿದೆ ಆ ಜಾಗಕ್ಕೆ ಚುಚ್ಚುತ್ತಾಳೆ! ಯಾದಗಿರಿ ನಗರದ ಹೊಸಳ್ಳಿಯಲ್ಲಿರುವ ಈ ನಕಲಿ ಕ್ಲಿನಿಕ್‌ಗೆ ಭಾರಿ ಡಿಮ್ಯಾಂಡ್. ಆದರೆ ಪ್ರತಿದಿನ ಈ ಸರ್ವಿಸ್ ಇರಲ್ಲ. ಭಾನುವಾರ ಮಾತ್ರ ಈ ಸರ್ವೀಸ್ ಇರುತ್ತದೆ. ಪ್ರತಿ ರೋಗಿಗಳಿಂದ 250 - 300 ರೂ ಕೀಳ್ತಾರೆ. ಕೇಳೋಕೆ ಇದು ತಮಾಷೆ ಎನಿಸಿದರೂ ಇಂತಹ ನಕಲಿ ವೈದ್ಯರಿಗೆ ಕಡಿವಾಣ ಹಾಕುವ ಅಗತ್ಯವಿದೆ.