ಧಾರವಾಡ: ಜೀವಭಯದಲ್ಲೇ ದಿನದೂಡುತ್ತಿವೆ ಪೊಲೀಸ್ ಕುಟುಂಬಗಳು, ಗೃಹಸಚಿವರೇ ಗಮನಿಸಿ
- ಜೀವಭಯದಲ್ಲೇ ದಿನದೂಡುತ್ತಿರುವ ಪೊಲೀಸರ ಕುಟುಂಬ!
- ಆರು ವರ್ಷ ಹಿಂದೆಯಷ್ಟೇ ನಿರ್ಮಾಣವಾಗಿರುವ ಕಟ್ಟಡಕ್ಕೆ ಕುಸಿಯುವ ಭೀತಿ
- ಸಾಧನಕೇರಿಯ ರಕ್ಷಾ ಕಾಲೊನಿಯಲ್ಲಿ ಪೊಲೀಸ್ ಸಿಬ್ಬಂದಿ ವಸತಿ ಸಮುಚ್ಚಯ
ಧಾರವಾಡ (ಸೆ. 26): ಸಾಧನಕೇರಿಯ ರಕ್ಷಾ ಕಾಲೊನಿಯಲ್ಲಿ ಪೊಲೀಸ್ ಸಿಬ್ಬಂದಿಗಾಗಿಯೇ ನಿರ್ಮಿಸಿರೋ ವಸತಿ ಕಟ್ಟಡಗಳು ಕುಸಿಯುವ ಭೀತಿಯಲ್ಲಿವೆ. ಒಟ್ಟು ಎರಡು ವಿಭಾಗಗಳಲ್ಲಿ ತಲಾ ಎರಡು ಮಹಡಿಗಳಿದ್ದು, ಒಟ್ಟು 24 ಕುಟುಂಬಗಳು ಇಲ್ಲಿವೆ. ದುರಂತ ಅಂದ್ರೆ ಇಡೀ ಕಟ್ಟಡವೇ ಈಗ ಹಿಂಭಾಗಕ್ಕೆ ಕುಸಿದು ಬೀಳುತ್ತೇನೋ ಅನ್ನೋ ಭೀತಿ ಎದುರಾಗಿದೆ.
ಹಲೋ ಮಿನಿಸ್ಟರ್: ಕ್ಷೇತ್ರದ ಸಮಸ್ಯೆ ಬಗೆಹರಿಸುವುದಾಗಿ ಗೃಹ ಸಚಿವರ ಭರವಸೆ
ಈ ಕಟ್ಟಡದ ಹಿಂಭಾಗದಲ್ಲಿ ಸಣ್ಣದಾಗಿ ಶುರುವಾಗಿದ್ದ ಕುಸಿತ ಈಗ ದೊಡ್ಡ ಪ್ರಮಾಣಕ್ಕೇರಿದೆ. ಆರಂಭದಲ್ಲಿ ಕಟ್ಟಡಕ್ಕೆ ಹಾಕಲಾಗಿದ್ದ ಆವರಣ ಗೋಡೆ ಕುಸಿದು ಬೀಳುತ್ತಿದೆ ಅಂತಾನೇ ಇಲ್ಲಿದ್ದವರು ಭಾವಿಸಿದ್ದರು. ಆದರೆ ಈಗ ಆವರಣ ಗೋಡೆ ಸಮೇತ ಕಟ್ಟಡಕ್ಕೆ ಮಾಡಲಾಗಿದ್ದ ಹೊರಕವಚವೂ ಸಹ ಕುಸಿಯೋದಕ್ಕೆ ಶುರುವಾದಾಗಿನಿಂದ ಇಲ್ಲಿರೋ ಪೊಲೀಸ್ ಕುಟುಂಬಗಳು ಜೀವ ಭಯದಲ್ಲಿ ದಿನ ಕಳೆಯುತ್ತಿವೆ.
ಇನ್ನು ಇಲ್ಲಿರುವ ಎಲ್ಲರೂ ಸಹ ಪೊಲೀಸರೇ. ಹೀಗಾಗಿ ಇವರಿಗೆ ತಮ್ಮ ಕ್ವಾರ್ಟರ್ಸ್ ಹೀಗಾಗಿದೆ ಅಂತಾ ಬಾಯಿಬಿಚ್ಚಿ ಮೇಲಾಧಿಕಾರಿಗಳ ಮುಂದೆ ಹೇಳುವಂತಿಲ್ಲ. ಅದಕ್ಕೆ ಶಿಸ್ತು, ಶಿಷ್ಟಾಚಾರ ಅಡ್ಡಿಯಾಗುತ್ತಿದೆ. ದುರಂತ ಸಂಭವಿಸೋ ಮುಂಚೆ ಮೇಲಾಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.