ಧಾರವಾಡ: ತಲ್ವಾರ್‌ನಿಂದ ಹುಟ್ಟುಹಬ್ಬದ ಕೇಕ್ ಕಟ್ ಮಾಡಿದ ಯುವಕ..!
* ಧಾರವಾಡ ತಾಲೂಕಿನ ಸಲಕೀನಕೊಪ್ಪ ಗ್ರಾಮದಲ್ಲಿ ನಡೆದ ಘಟನೆ
* ಹುಟ್ಟುಹಬ್ಬ ಆಚರಣೆ ಮಾಡಿದ ವಿಡಿಯೋ ವೈರಲ್
* ಧಾರವಾಡ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
ಧಾರವಾಡ(ಸೆ.09): ತಲ್ವಾರ್‌ನಿಂದ ಕೇಕ್ ಕಟ್ ಮಾಡುವ ಮೂಲಕ ಯುವಕನೊಬ್ಬ ಹುಟ್ಟುಹಬ್ಬ ಆಚರಿಕೊಂಡ ಘಟನೆ ತಾಲೂಕಿನ ಸಲಕೀನಕೊಪ್ಪ ಗ್ರಾಮದಲ್ಲಿ ನಡೆದಿದೆ. ಪ್ರವೀಣ ಸಂದೀಮನಿ ಎಂಬಾತನೇ ತಲ್ವಾರ್‌ನಿಂದ ಕೇಕ್ ಕಟ್ ಮಾಡಿದ ಯುವಕನಾಗಿದ್ದಾನೆ. ಪ್ರತಿಷ್ಠಿತ ದಾಬಾ ಮಾಲೀಕನ ಸಹೋದರನಾಗಿರುವ ಪ್ರವೀಣ ಗೆಳೆಯರೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿದ ವಿಡಿಯೋ ಇದೀಗ ವೈರಲ್ ಅಗಿದೆ. ಧಾರವಾಡ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.