9 ಎಕರೆ ಕಬ್ಬು ಬೆಳೆ ಭಸ್ಮ, ಹೆಸ್ಕಾಂ ಎಡವಟ್ಟಿಗೆ ಕೊನೆ ಯಾವಾಗ?
ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತ ಕಂಗಾಲು/ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ, ರೈತ ಬೆಳೆದ ಕಬ್ಬು ಬೆಳೆ ಸುಟ್ಟು ಭಸ್ಮ/ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 10 ಲಕ್ಷ ಮೌಲ್ಯದ ಕಬ್ಬು ನಾಶ/ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬಿನ ಗದ್ದೆಗೆ ಬೆಂಕಿ/ 9 ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬು, 25 ಮಾವಿನ ಮರ ಸುಟ್ಟು ಭಸ್ಮ
ಧಾರವಾಡ(ಡಿ. 23) ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ, ರೈತ ಬೆಳೆದ ಕಬ್ಬು ಬೆಳೆ ಸುಟ್ಟು ಭಸ್ಮವಗಾದೆ. ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 10 ಲಕ್ಷ ಮೌಲ್ಯದ ಕಬ್ಬು ನಾಶವಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬಿನ ಗದ್ದೆಗೆ ಬೆಂಕಿ ತಗುಲಿದ್ದು ಬೆಳೆ ಹಾನಿಯಾಗಿದೆ.
ಕಬ್ಬು ತಿನ್ನುವಾಗ ಸಿಕ್ಕಿಬಿದ್ದ ಆನೆ
9 ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬು, 25 ಮಾವಿನ ಮರ ಸುಟ್ಟು ಭಸ್ಮವಾಗಿದೆ. ಧಾರವಾಡ ತಾಲೂಕಿನ ದಡ್ಡಿ ಕಮಲಾಪುರದಲ್ಲಿ ನಡೆದ ಘಟನೆ ನಡೆದಿದ್ದು ರೈತ ನಾಗರಾಜ ಕುಲಕರ್ಣಿ ಎಂಬುವರ ಬೆಳೆ ನಷ್ಟವಾಗಿದೆ. ರೈತ ನಾಗರಾಜ ಕುಲಕರ್ಣಿ ಜಮೀನು ಗೇಣಿ ಪಡೆದು ಬೆಳೆ ಬೆಳದಿದ್ದರು. ಇದೀಗ ಮುಂದಿನ ದಾರಿನ ಕಾಣದೆ ರೈತ ಕಂಗಾಲಾಗಿದ್ದಾರೆ.