Asianet Suvarna News Asianet Suvarna News

ಧಾರವಾಡ: ಚಿನ್ನದ ಗಣಿಗಾರಿಕೆಗೆ ಮುಂದಾದ ಸರ್ಕಾರ; ಭೂಮಿ ನೀಡಲು ರೈತರು ಹಿಂದೇಟು

- ಧಾರವಾಡದ ಮಂಗಳಗಟ್ಟಿ ಗ್ರಾಮದಲ್ಲಿ  ಚಿನ್ನದ ನಿಕ್ಷೇಪ

- ಚಿನ್ನದ ಗಣಿಗಾರಿಕೆ ನಡೆಸಲು ಮುಂದಾಗಿರುವ ಸರ್ಕಾರ

- ಅನ್ನ ಕೊಡುವ ಭೂಮಿ ನೀಡಲು ರೈತರು ಹಿಂದೇಟು
 

Sep 25, 2021, 5:37 PM IST

ಧಾರವಾಡ (ಸೆ. 25): ಪೇಡಾನಗರಿ ಎಂದೇ ಪ್ರಸಿದ್ಧಿ ಹೊಂದಿರೋ ಧಾರವಾಡ ಜಿಲ್ಲೆ ಇದೀಗ ಚಿನ್ನದ ನಗರಿ ಎಂಬಾ ಖ್ಯಾತಿ ಪಡೆಯುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ. ಕೇಂದ್ರ ಸರ್ಕಾರ ರಾಜ್ಯದಲ್ಲಿ ಏಳು ಚಿನ್ನದ ನಿಕ್ಷೇಪಗಳನ್ನು ಗುರುತಿಸಿದ್ದು, 280 ಟನ್ ಚಿನ್ನ ಇರುವ ಬಗ್ಗೆ ಪತ್ತೆ ಹಚ್ಚಿದೆ. ಅಲ್ಲದೇ ರಾಜ್ಯ ಸರ್ಕಾರ ಚಿನ್ನದ ಗಣಿಗಾರಿಕೆಗೆ ಟೆಂಡರ್ ಕರೆಯಲು ಸಿದ್ದತೆ ನಡೆಸಿದೆ. 

ಹೈವೇ ಉದ್ಘಾಟನೆಗೆ ಮೀನಮೇಷ, ವಾಹನಗಳ ಓಡಾಟದಿಂದ ಹೆಚ್ಚಾಗಿದೆ ಅಪಘಾತಗಳ ಭಯ!

 ಮಂಗಳಗಟ್ಟಿ ಗ್ರಾಮದಲ್ಲಿಯೇ ಒಟ್ಟು 27.49 ಚದರ ಪ್ರದೇಶದಲ್ಲಿ ಚಿನ್ನವಿರುವ ಬಗ್ಗೆ ಖಾಸಗಿ ಸಂಸ್ಥೆ ಸರ್ವೆ ನಡೆಸಿದೆ. ಹೀಗಾಗಿ ಕೇಂದ್ರ ಸರ್ಕಾರ ಗುರುತಿಸಿದ ನಿಕ್ಷೇಪದಲ್ಲಿ ರಾಜ್ಯ ಸರ್ಕಾರ ಚಿನ್ನ ತೆಗೆಯೋಕೆ ತಯಾರಿ ಏನೋ ನಡೆಸಿದೆ. ಆದ್ರೆ ಅಲ್ಲಿರುವ ರೈತರ ಜಮೀನುಗಳ ಬಗ್ಗೆ ಹಾಗೂ ಚಿನ್ನದ ಗಣಿಗಾರಿಕೆಯಿಂದ ಗ್ರಾಮದ ಜನರ ಆರೋಗ್ಯದ ಬಗ್ಗೆಯೂ ಗ್ರಾಮಸ್ಥರು ಚಿಂತನೆ ನಡೆಸಿದ್ದಾರೆ.