ವರ್ಷಕ್ಕೊಮ್ಮೆ ಮಾತ್ರ ದೇವಿ ದರ್ಶನ: ಜಾತ್ರಾ ಮಹೋತ್ಸವಕ್ಕೆ ಹರಿದು ಬಂದ ಜನಸಾಗರ
* ದೇವಿರಮ್ಮ ಜಾತ್ರಾ ಮಹೋತ್ಸವ
* ಬರಿಗಾಲಲ್ಲೇ 3 ಸಾವಿರ ಅಡಿ ಎತ್ತರದ ಬೆಟ್ಟವನ್ನೇರಿ ದೇವಿ ದರ್ಶನ ಪಡೆದ ಭಕ್ತರು
* ಕೊರೋನಾ ಹಿನ್ನಲೆಯಲ್ಲಿ ಸ್ಥಳೀಯರಿಗೆಷ್ಟೇ ದೇವಿ ದರ್ಶನ ಪಡೆಯುಲು ಅವಕಾಶ
ಚಿಕ್ಕಮಗಳೂರು(ನ.05): ಆ ಬೆಟ್ಟದ ತಾಯಿಯನ್ನ ನೋಡ್ಬೇಕು ಅದು ಸುಮ್ನೆ ಅಲ್ಲ. ಅದೊಂದು ತರಾ ಸವಾಲೇ ಸರಿ. ಆ ಬೆಟ್ಟವನ್ನ ಹತ್ಬೇಕು ಅಂತಾನೆ ಭಕ್ತರು ದಿನಗಳನ್ನ ಎಣಿಸ್ತಿರ್ತಾರೆ. ಕಾಡು ಮೇಡಿನ ಸವಾರಿ ಮಾಡಿ, ಬೆಟ್ಟ-ಗುಡ್ಡ ಏರಿ ಹತ್ತೋ ಚಾಲೆಂಜ್ ಇದ್ಯಲ್ಲಾ ಅದು ನಿಜಕ್ಕೂ ರೋಮಾಂಚನ. ಆದ್ರೆ, ವರ್ಷಕ್ಕೊಮ್ಮೆ ಮಾತ್ರ ಆ ದೇವಿ ದರ್ಶನ ನೀಡುವ ಈ ದಿನಕ್ಕಾಗಿ ಭಕ್ತರು ಚಾತಕ ಪಕ್ಷಿಗಳಂತೆ ಕಾಯ್ತಿರ್ತಾರೆ. ಎಂತದ್ದೇ ಕಷ್ಟವಾಗ್ಲಿ, ಯಾವುದೇ ಸಮಸ್ಯೆ ಇರ್ಲಿ ಎಲ್ಲವನ್ನೂ ಬದಿಗಿಟ್ಟು ದೇವಿ ದರ್ಶನ ಮಾಡಿದ ಭಕ್ತರು ದೇವಿಯನ್ನ ಕಣ್ತುಂಬಿಕೊಂಡು ನಿಟ್ಟುಸಿರು ಬಿಡ್ತಾರೆ. ಮಾಜಿ ಸಚಿವ ಸಿ.ಟಿ ರವಿ, ಎಸ್.ಪಿ. ಅಕ್ಷಯ್ ಅವರು ಬೆಟ್ಟ ಹತ್ತಿ ದೇವಿಯ ದರ್ಶನವನ್ನ ಪಡೆದಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.
ದೀಪಾವಳಿ ರಾಶಿಫಲ: ವೃಷಭ ರಾಶಿಯವರು ಡಿಸೆಂಬರ್ ಮಧ್ಯದವರೆಗೆ ಎಚ್ಚರವಹಿಸಿ, ಉಳಿದ ರಾಶಿ?