ನಾವು ಹೇಳಿದವರಿಗೆ ವ್ಯಾಕ್ಸಿನ್ ಕೊಡಬೇಕು, ವೈದ್ಯ ಸಿಬ್ಬಂದಿ ಮೇಲೆ ಕಾರ್ಪೋರೇಟರ್‌ಗಳ ಒತ್ತಡ
* ಈ ರೀತಿ ಜನಪ್ರತಿನಿಧಿಗಳು ಒತ್ತಡ ಹೇರಿದ್ರೆ ಕೆಲಸ ಮಾಡುವುದು ಕಷ್ಟ ಎಂದ ವೈದ್ಯರು
* ನಾವು ಹೇಳಿದವರಿಗೆ ವ್ಯಾಕ್ಸಿನ್ ಕೊಡಬೇಕೆಂದು ವೈದ್ಯ ಸಿಬ್ಬಂದಿ ಮೇಲೆ ಒತ್ತಡ
* ವ್ಯಾಕ್ಸಿನ್ ಕೌಂಟರ್‌ಗಳಲ್ಲಿ ಕಾರ್ಪೋರೇಟರ್‌ಗಳ ದಬ್ಬಾಳಿಕೆ
ದಾವಣಗೆರೆ(ಜು.04): ಕೋವಿಡ್ ವ್ಯಾಕ್ಸಿನ್ ಕೌಂಟರ್‌ಗಳಲ್ಲಿ ಕಾರ್ಪೋರೇಟರ್‌ಗಳು ದಬ್ಬಾಳಿಕೆ ನಡೆಸಿದ ಘಟನೆ ಇಂದು(ಭಾನುವಾರ) ನಗರದಲ್ಲಿ ಇಂದು ನಡೆದಿದೆ. ನಾವು ಹೇಳಿದವರಿಗೆ ವ್ಯಾಕ್ಸಿನ್ ಕೊಡಬೇಕೆಂದು ವೈದ್ಯ ಸಿಬ್ಬಂದಿ ಮೇಲೆ ಕಾರ್ಪೋರೇಟರ್‌ಗಳು ಒತ್ತಡ ಹಾಕಿದ್ದಾರೆ. ಮಹಾನಗರ ಪಾಲಿಕೆ ನಗರ ಭಾಗದ ಪಿಹೆಚ್‌ಸಿಗಳಲ್ಲಿ ಈ ರೀತಿ ಒತ್ತಡ ಹಾಕಲಾಗುತ್ತಿದೆ. ಈ ಸಂಬಂಧ ವೈದ್ಯ ಸಿಬ್ಬಂದಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.