Asianet Suvarna News Asianet Suvarna News

ದಾವಣಗೆರೆ; ಬಿಎಸ್‌ವೈ ಬೆನ್ನಿಗೆ ನಿಂತ ಮತ್ತೊಬ್ಬರು ಸ್ವಾಮೀಜಿ

* ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ
* ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಸೂಕ್ತ ಅಲ್ಲ
* ದಾವಣಗೆರೆಯಲ್ಲಿ ಕೇದಾರಲಿಂಗ ಶಿವಶಾಂತ ವೀರ ಶಿವಾಚಾರ್ಯ ಶ್ರೀ ಹೇಳಿಕೆ

ದಾವಣಗೆರೆ(ಜು. 20)  ಮುಂದಿನ 2 ವರ್ಷ ಯಡಿಯೂರಪ್ಪವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು. ಇಲ್ಲ ಅಂದ್ರೆ ಬಿಜೆಪಿಗೆ ಉಳಿಗಾಲವಿಲ್ಲ ಎಂದು ಚನ್ನಗಿರಿ ಪಟ್ಟಣದಲ್ಲಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತ ವೀರ ಶಿವಾಚಾರ್ಯ ಶ್ರೀ ಎಚ್ಚರಿಸಿದ್ದಾರೆ.

ಸಿಎಂ ಬದಲಾವಣೆ ಕೂಗಿನ ನಂತರ ಮಿತ್ರಮಂಡಳಿ ಫುಲ್ ಅಲರ್ಟ್

ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೈಬಿಡುತ್ತಾರೆ ಎಂಬ ವದಂತಿ ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಅವರು ಮಾತನಾಡಿದರು. ಸಿಎಂ ಸ್ಥಾನದಿಂದ ಬಿಎಸ್ವೈರನ್ನು ಕೆಳಗಿಳಿಸುವುದು ಸೂಕ್ತವಲ್ಲ.  ಮುಂದಿನ 2 ವರ್ಷ ಯಡಿಯೂರಪ್ಪ ಅವರಿಗೆ ಬಿಟ್ಟು ಕೊಟ್ಟರೆ ಬಿಜೆಪಿಗೆ ಅನುಕೂಲ ಆಗಲಿದೆ ಇಲ್ಲದಿದ್ದರೆ ಬಿಜೆಪಿ  ಪಕ್ಷ  ಸಂಘಟನೆ ಕುಂದಬಹುದು.  ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬರೀ ವೀರಶೈವ ಜನಾಂಗವಲ್ಲ ಮಠ-ಮಂದಿರ ಚರ್ಚ್ ಮಸೀದಿ ಎಲ್ಲಾ ಜನಾಂಗದವರಿಗೂ ಅನುಕೂಲ ಮಾಡಿದ್ದಾರೆ ಎಂದು ಹೇಳಿದರು.

 

Video Top Stories