Asianet Suvarna News Asianet Suvarna News

Darshan: ಮಕ್ಕಳ ಅಂಧಾಭಿಮಾನಕ್ಕೆ ಬೀದಿಗೆ ಬಿದ್ದ ಕುಟುಂಬಗಳು: ದರ್ಶನ್ ನಂಬಿ ಮಗ ಜೈಲುಪಾಲು, ಪೋಷಕರ ಕಣ್ಣೀರು!


ದರ್ಶನ್ ಅಭಿಮಾನಿ ಆಗಿದ್ದ ತಪ್ಪಿಗೆ ಆಯ್ತು ಜೈಲಿನ ದರ್ಶನ..!
ಮಗನ ಚಿಂತೆಯಿಂದಾಗಿ ಹಾಸಿಗೆ ಹಿಡಿದ ನಂದೀಶ್ ಹೆತ್ತಮ್ಮ..!
ತಮ್ಮ ನಂದೀಶ್ನನ್ನ ನೆನಸಿಕೊಂಡು ಕಣ್ಣೀರು ಹಾಕಿದ ಅಕ್ಕ..!

ಮನೆಗೆ ಊರುಗೋಲಾಗಿದ್ದ ಮಗ ದರ್ಶನ್ ಅಭಿಮಾನಿ ಆಗಿದ್ದೇ ತಪ್ಪಾಯ್ತು ಬಾಸ್ ಎಂದು ಹೋದವರಿಗೆ.. ಪರಪ್ಪನ ಅಗ್ರಹಾರದ(Parappana Agrahara) ದರ್ಶನವಾಗಿದೆ. ದರ್ಶನ್‌ (Darshan) ಅಭಿಮಾನಿ ಆಗಿದ್ದಕ್ಕೆ ಅವರ ಅಭಿಮಾನಿಗಳಿಗೆ ಇದೀಗ ಕಣ್ಣೀರೆ ಗತಿಯಾಗಿದೆ. ಯಾರೋ ಮಾಡಿದ ತಪ್ಪಿಗೆ ಇನ್ನಾರೋ ಕಂಬಿ ಹಿಂದೆ ಹೋಗಿ ಶಿಕ್ಷೆ ಅನುಭವಿಸ್ತಿದ್ದಾರೆ. ಅದಕ್ಕೆ ಅವರ ಕುಟುಂಬದವರು ಕಂಗಾಲಾಗಿ ಕಣ್ಣೀರು ಹಾಕ್ತಿದ್ದಾರೆ. ದರ್ಶನ್ ಮೇಲಿನ ಅಂಧಾಭಿಮಾನದಿಂದ ಅವರು ಅಭಿಮಾನಿಗಳು ಈಗ ಜೈಲಿಗೆ ಹೋಗಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಬರ್ಬರವಾಗಿ ಕೊಲೆ(Renukaswamy murder case) ಮಾಡಿದ ಆರೋಪಕ್ಕಾಗಿ ದರ್ಶನ್ ಈಗ ಎ-2 ಆರೋಪಿಯಾಗಿ, 6106 ಬ್ಯಾಚ್ ಹಾಕ್ಕೊಂಡು ಕಂಬಿ ಹಿಂದೆ ಹೋಗಿದ್ದಾಗಿದೆ. ಹಾಗೆಯೇ ಎ-1 ಆರೋಪಿ ಪವಿತ್ರಾಗೌಡ, 6020 ಬ್ಯಾಚ್ ಹಾಕ್ಕೊಂಡು ಜೈಲಿನಲ್ಲಿ ಕೂತಿದ್ದಾಳೆ. ಇವರಿಬ್ಬರೂ ಮಾಡಿದ ಪಾಪದ ಫಲ ಅನುಭವಿಸ್ತಿದ್ದಾರೆ. ಮುಂದೆ ಬೇಲ್ ತೆಗೆದುಕೊಂಡು ಹೊರಗೂ ಬರಬಹುದು. ಆದರೆ ದರ್ಶನ್ ಹಿಂದಿಂದೆ ಸಾಲು ಸಾಲಾಗಿ ಹೋದ 13 ಆರೋಪಿಗಳ ಕಥೆ ಮಾತ್ರ ಹೇಳತೀರದಾಗಿದೆ.

ಇದನ್ನೂ ವೀಕ್ಷಿಸಿ:  ಅಭಿಮಾನಿಗಳಿಗೆ ತಲೆ ಹೊಡಿಬೇಡಿ ಎಂದವನೇ ಕೊಲೆ ಮಾಡಿಬಿಟ್ಟ! ಹತ್ಯೆಯಾಗಿದ್ದು ಅಭಿಮಾನಿ, ಜೈಲಿಗೆ ಹೋಗಿದ್ದು ಅಭಿಮಾನಿಗಳೇ!

Video Top Stories