ನಿರ್ಮಾಪಕ ಉಮಾಪತಿಗೆ ತಗಡು ಎಂದಿದ್ದ ದರ್ಶನ್..! ಚಿತ್ರರಂಗ ಮೌನ ರಹಸ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್..!

ದರ್ಶನ್ ಕೊಲೆ ಕೇಸ್ ಬಗ್ಗೆ ಸುದೀಪ್ ಫಸ್ಟ್ ರಿಯಾಕ್ಷನ್..!
ದರ್ಶನ್ ವಿರುದ್ಧ ಸ್ಯಾಂಡಲ್‌ವುಡ್ ಸೈಲೆಂಟ್ ಆಗಿದ್ದೇಕೆ..?
ಸೆಲೆಬ್ರೆಟಿಗಳಾದವರು ಯಾರೂ ದೇವರಲ್ಲ ಎಂದ ಸುದೀಪ್..!

First Published Jun 18, 2024, 5:28 PM IST | Last Updated Jun 18, 2024, 5:28 PM IST

ಗ್ಯಾಂಗ್ ಅರೆಸ್ಟ್ ಪ್ರಕರಣ(Darshan arrest) ದಿನ ದಿನಕ್ಕೂ ಹೊಸ ತಿರುವು ಪಡೆದುಕೊಳ್ತಿದೆ. ದುಷ್ಟ ಡಿ-ಗ್ಯಾಂಗ್ ಕ್ರೌರ್ಯಕ್ಕೆ ಇಡಿ ಸ್ಯಾಂಡಲ್‌ವುಡ್(Sandalwood) ತಲೆ ತಗ್ಗಿಸುವಂತಾಗಿದೆ. ದರ್ಶನ್ ವಿರುದ್ಧ ಅನೇಕ ಕಡೆ ಪ್ರೊಟೆಸ್ಟ್‌ಗಳು ನಡೀತಿವೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಸ್ಯಾಂಡಲ್ವುಡ್ ಈಗ ವೈಲೆಂಟ್ ಆಗ್ತಿದೆ. ದರ್ಶನ್(Darshan) ಕೇಸ್ ಬಗ್ಗೆ ಸುದೀಪ್ ರಿಯಾಕ್ಟ್ ಮಾಡಿದ್ದಾರೆ. ಇದಿಷ್ಟೆ ಅಲ್ಲದೇ ಕಿಚ್ಚ ಸುದೀಪ್ ಅವರು ಅಭಿಮಾನಿಗಳಿಗೆ ಕಿವಿಮಾತುಗಳನ್ನ ಹೇಳಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ(Renukaswamy murder case) ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಕಪ್ಪುಚುಕ್ಕಿಯಾಗಿದೆ. ರೇಣುಕಾಸ್ವಾಮಿ ಕುಟುಂಬದ ಜೊತೆ ಕನ್ನಡ ಸಿನಿರಂಗಕ್ಕೂ ನ್ಯಾಯ ಸಿಗಬೇಕು ಅಂತ ನಟ ಸುದೀಪ್ ಹೇಳಿದ್ದಾರೆ. ದರ್ಶನ್ ಅನ್ನೋ ಅಹಂಕಾರ ತುಂಬಿದ ವ್ಯಕ್ತಿ, ಕೆಲಸ ಆಗೋವರೆಗೂ ಕೈ ಮುಗೀತಾನೆ. ಕಾಲೂ ಹಿಡೀತಾನೆ, ಆದ್ರೆ ಕೆಲಸ ಆದ್ಮೇಲೆ ತಿರುಗಿ ಬೀಳ್ತಾನೆ. ಇದೇ ದುರ್ಬುದ್ಧಿಯೇ ದರ್ಶನ್‌ನನ್ನು ಇವತ್ತು ಈ ಹಂತಕ್ಕೆ ಬಂದು ನಿಲ್ಲಿಸಿದ್ದು.

ಇದನ್ನೂ ವೀಕ್ಷಿಸಿ:  Darshan: ಪುಡಾಂಗ್ ಪಟಾಲಂ..ಆರೋಪಿಗಳ ಕತೆ ಏನು..? ಕಣ್ಣೀರಲ್ಲಿ ಮುಳುಗೇಳುತ್ತಿವೆ ಆ ಆರೋಪಿಗಳ ಕುಟುಂಬ!