Asianet Suvarna News Asianet Suvarna News

Darshan: ಪುಡಾಂಗ್ ಪಟಾಲಂ..ಆರೋಪಿಗಳ ಕತೆ ಏನು..? ಕಣ್ಣೀರಲ್ಲಿ ಮುಳುಗೇಳುತ್ತಿವೆ ಆ ಆರೋಪಿಗಳ ಕುಟುಂಬ!

ದುಡ್ಡಿದ್ದವರು  ಮೂವರು..ಉಳಿದವರೆಲ್ಲಾ ಕಡುಬಡವರು
ಯಾರ್ಯಾರ ವಿರುದ್ಧ ಏನೇನು ಆರೋಪವಿದೆ ಗೊತ್ತಾ..?
ಪ್ರತಿದಿನವೂ ತಿರುವು ಪಡೆಯುತ್ತಿದೆ ಬರ್ಬರ ಹತ್ಯೆ  ಪ್ರಕರಣ!

ನೋಡ್ತಾ ನೋಡ್ತಾ ಬಡವರ ಮಕ್ಕಳ ಬುಡಕ್ಕೇ ಬರ್ತಾ ಇದೆ ರೇಣುಕಾಸ್ವಾಮಿ ಕೊಲೆ ಪ್ರಕರಣ(Renukaswamy murder case). ಸಣ್ಣ ಪುಟ್ಟ ಕ್ರಿಮಿನಲ್ ಕೇಸ್‌ ಇಲ್ಲದವರು, ಈಗ ಇದ್ದಕ್ಕಿದ್ದ ಹಾಗೆ ಕೊಲೆ ಆರೋಪಿಗಳಾಗಿದ್ದಾರೆ. ಡೆವಿಲ್ ಗ್ಯಾಂಗ್‌ನ ಆ 9 ಮಂದಿ. ದರ್ಶನ್(Darshan) ದರ್ಶನ ಮಾಡೇ ಇರ್ಲಿಲ್ಲ. ದರ್ಶನ್ ಆರಡಿ ಕಟೌಟ್ ಮನುಷ್ಯ ಬಿಗ್ ಸ್ಕ್ರೀನ್‌ನಲ್ಲಿ ಕಾಣಿಸಿಕೊಂಡ್ರೆ, ಅಭಿಮಾನಿಗಳು ಕುಣಿದು ಕುಪ್ಪಳಿಸ್ತಾ ಇದ್ರು. ಆದ್ರೆ ಈಗ, ಈಗ ಅದೇ ದರ್ಶನ್ ಅಭಿಮಾನಿಗಳು ಆತನ ಸಿನಿಮಾಗೋಸ್ಕರ ಅಲ್ಲ, ಆತನ ರಿಲೀಸ್‌ಗೋಸ್ಕರ ಕಾಯೋ ಸಿಚುಯೇಷನ್ ಬಂದುಬಿಟ್ಟಿದೆ. ಅದಕ್ಕೆಲ್ಲಾ ಕಾರಣ, ರೇಣುಕಾಸ್ವಾಮಿ ಅನ್ನೋನಾ ಬರ್ಬರ ಹತ್ಯೆ(Murder) ಕೇಸು. ಸುಣಕಲು ಮೈಕಟ್ಟಿನ ರೇಣುಕಾಸ್ವಾಮಿನಾ, ಬರೋಬ್ಬರಿ 16 ಮಂದಿ ಸೇರ್ಕೊಂಡು ಬಾರಿಸಿದ್ರೆ, ಆ ಬಡಪಾಯಿ ಜೀವ ಏನಾಗಿರ್ಬೋದು ಅಂತ ಯೋಚಿಸಿದ್ರೆನೇ, ಮೈ ನಡುಗಿಬಿಡುತ್ತೆ. ರೇಣುಕಾಸ್ವಾಮಿ ಮೈಮೇಲೆಲ್ಲಾ ಸುಟ್ಟ ಗಾಯಗಳು. ಎದೆ ಎಲುಬುಗಳೆಲ್ಲಾ ಪುಡಿಪುಡಿ. ದವಡೆ ಕಿತ್ತು ಆಚೆ ಬಂದಿದೆ. ಅದನ್ನೆಲ್ಲಾ ಕೇಳ್ತಾ ಇದ್ರೆನೇ, ಸಾಯೋ ಕ್ಷಣದ ತನಕ ರೇಣುಕಾಸ್ವಾಮಿ ಅದೆಂಥಾ ರೌರವ ನರಕ ದರ್ಶನ ಮಾಡಿದ್ನೋ ಏನೋ. ದರ್ಶನ್ ಜೊತೆಗಿದ್ದ ಪವಿತ್ರಾಗೌಡಗೆ ರೇಣುಕಾಸ್ವಾಮಿ  ಅಶ್ಲೀಲ ಮೆಸೇಜ್ ಮಾಡಿದ್ದ ಅನ್ನೋ ಉತ್ತರ ಸಿಗುತ್ತೆ. ಕಳಿಸಬಾರದ ಫೋಟೋ ಕಳಿಸಿ, ಮಾನಸಿಕ ಕಿರುಕುಳ ಕೊಟ್ಟಿದ್ದ ಅನ್ನೋದು ಗೊತ್ತಾಗುತ್ತೆ. ಹಾಗವನು ಮಾಡಿದ್ರೆ, ಅದು ತಪ್ಪೇ.. ಅಕ್ಷರಶಃ ತಪ್ಪೆ. ಆದ್ರೆ, ಆ ತಪ್ಪಿಗೆ ಇಂಥಾ ಕೊಲೆ ಶಿಕ್ಷೆಯಾಗಬಾರದಿತ್ತು.. ಪೊಲೀಸರಿಗೆ ಈ ವಿಚಾರ ತಿಳಿಸಿದ್ರೆ, ಅವರೇ ಎರಡು ಬಿಗಿದು ರೇಣುಕಾಸ್ವಾಮಿಗೆ ಬುದ್ಧಿ ಕಲಿಸ್ತಾ ಇದ್ರು.

ಇದನ್ನೂ ವೀಕ್ಷಿಸಿ:  Renukaswamy Murder Case: ಶಿಕ್ಷೆಯಾಗಲು ಡಿಜಿಟಲ್ ಎವಿಡೆನ್ಸ್ ಅಷ್ಟೇ ಸಾಕಾ..? ಈ ಕೇಸ್‌ನಲ್ಲಿ ಪ್ರತ್ಯಕ್ಷ ಸಾಕ್ಷಿಗಳೇ ಇಲ್ವಾ ?

Video Top Stories