Chikkamagaluru: ಕುಡಿಯುವ ನೀರಿಗಾಗಿ ದಂಪತಿಗಳ ಭಗೀರಥ ಪ್ರಯತ್ನ

*  ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಣಜೂರು ಗ್ರಾಮದಲ್ಲಿ ನಡೆದ ಘಟನೆ
*  ಕುಡಿಯುವ ನೀರಿಗಾಗಿ ಪನತೊಟ್ಟು ಬಾವಿ ಅಗೆದ ದಂಪತಿ
*  ಕುಡಿಯುವ ನೀರಿದಾಗಿ ನಡೆದ ಕಿರಿಕ್‌ ಬಾವಿ ತೆಗೆಯಲು ಪ್ರೇರಣೆ

First Published Mar 13, 2022, 10:42 AM IST | Last Updated Mar 13, 2022, 10:42 AM IST

ಚಿಕ್ಕಮಗಳೂರು(ಮಾ.13): ಸ್ವಾಭಿಮಾನದ ಕಿಚ್ಚು ಕೆಲವರಲ್ಲಿ ಯಾವ ಮಟ್ಟಿಗೆ ಇರುತ್ತೆ ಅನ್ನೋದಕ್ಕೆ ಚಿಕ್ಕಮಗಳೂರಿನ ದಂಪತಿಯ ಕಾರ್ಯವೇ ಸಾಕ್ಷಿಯಾಗಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಣಜೂರು ಗ್ರಾಮದ ರಾಜು ಹಾಗೂ ಶಾರದಾ ದಂಪತಿ ಕುಡಿಯುವ ನೀರಿಗಾಗಿ ಪನತೊಟ್ಟು ಬಾವಿಯೊಂದನ್ನ ಅಗೆದಿದ್ದಾರೆ. ಪಂಚಾಯ್ತಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಗ್ರಾಮದ ಕೆಲವರ ಹತ್ತಿರ ಕುಡಿಯುವ ನೀರಿದಾಗಿ ನಡೆದ ಕಿರಿಕ್‌ಗಳೇ ಬಾವಿ ತೆಗೆಯಲು ಪ್ರೇರಣೆಯಾಗಿದೆ. ಸುಮಾರು ಒಂದೂವರೆ ತಿಂಗಳಿನಿಂದ 60 ಅಡಿ ಬಾವಿಯನ್ನ ತೆಗೆದು ಭಗೀರಥ ಪ್ರಯತ್ನಕ್ಕೆ ಜಯಸಿಕ್ಕಂತಾಗಿದೆ. 

Raichur: ಮಂತ್ರಾಲಯದಲ್ಲಿ ಯುವ ಬ್ರಿಗೇಡ್‌ನಿಂದ ತುಂಗಾನದಿ ಸ್ವಚ್ಛತಾ ಕಾರ್ಯ