Chikkamagaluru: ಅಂಗನವಾಡಿಯಲ್ಲಿ ಭ್ರಷ್ಟಾಚಾರದ ವಾಸನೆ..!
* ರಿಜಿಸ್ಟರ್ ಬುಕ್, ತೂಕದ ಯಂತ್ರದ ವಿತರಣೆಯಲ್ಲಿ ಭ್ರಷ್ಟಾಚಾರ
* ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಂತರಿಕ ತನಿಖೆಯಲ್ಲಿ ಹಣ ದುರುಪಯೋಗದ ಆರೋಪ
* ಸೇರಿದಂತೆ ಕೆಟಿಪಿಪಿ ಕಾಯ್ದೆ ಉಲ್ಲಂಘಣೆ ಬಗ್ಗೆಯೂ ವರದಿಯಲ್ಲಿ ಉಲ್ಲೇಖ
ಚಿಕ್ಕಮಗಳೂರು(ಫೆ.13): ಚಿಕ್ಕಮಗಳೂರಿನ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡಿರುವ ರಿಜಿಸ್ಟರ್ ಬುಕ್, ತೂಕದ ಯಂತ್ರದ ವಿತರಣೆಯಲ್ಲಿ ಭ್ರಷ್ಟಾಚಾರದ ವಾಸನೆ ಕೇಳಿ ಬರುತ್ತಿದೆ. ಅಂಗನವಾಡಿಗಳಲ್ಲಿ ಗೋಲ್‌ಮಾಲ್ ನಡೆದಿರುವ ಬಗ್ಗೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಂತರಿಕ ತನಿಖೆಯಲ್ಲಿ ಹಣ ದುರುಪಯೋಗದ ಆರೋಪ ಕೇಳಿ ಬಂದಿದೆ. ರಿಜಿಸ್ಟರ್‌ಗಳಲ್ಲಿ ಬೇರೆ ಬೇರೆ ದರ ಸೇರಿದಂತೆ ಕೆಟಿಪಿಪಿ ಕಾಯ್ದೆ ಉಲ್ಲಂಘಣೆ ಬಗ್ಗೆಯೂ ವರದಿಯಲ್ಲಿ ನಮೂದಿಸಿದ್ದಾರೆ. 2021 ರಲ್ಲಿ ಅಂಗವಾಡಿಗಳಿಗೆ ಖರೀದಿ ಮಾಡಿರುವ ರಿಜಿಸ್ಟರ್ ಬುಕ್, ತೂಕದ ಯಂತ್ರದಲಲ್ಲಿ ಭ್ರಷ್ಟಾಚಾರ ನಡೆದಿರೋದು ಕಂಡು ಬಂದಿದೆ.