Indira Canteen ತೆರವಿಗೆ ಮುಂದಾಗಿದ್ಯಾ ಬಿಜೆಪಿ ಸರ್ಕಾರ?

*  ಬಿಬಿಎಂಪಿ ವಿರುದ್ಧ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ತೀವ್ರ ಆಕ್ರೋಶ 
*  ಬಡವರ ಹಸಿವು ನೀಗಿಸಲು ಇಂದಿರಾ ಕ್ಯಾಂಟೀನ್‌ ಆರಂಭಿಸಿದ್ದ ಸಿದ್ದು ಸರ್ಕಾರ
*  ಬಿಜೆಪಿ ಸರ್ಕಾರದಲ್ಲೇ ಕ್ಯಾಂಟೀನ್‌ ತರವಿಗೆ ಪರ- ವಿರೋಧ ಚರ್ಚೆ

First Published Feb 13, 2022, 9:37 AM IST | Last Updated Feb 13, 2022, 9:37 AM IST

ಬೆಂಗಳೂರು(ಫೆ.13): ಇಂದಿರಾ ಕ್ಯಾಂಟೀನ್‌ ತೆರವಿಗೆ ಮುಂದಾಗಿದೆಯಾ ಬಿಬಿಎಂಪಿ?, ಕ್ಯಾಂಟೀನ್‌ ತೆರವಿಗೆ ಮುಂದಾಗುತ್ತಿದ್ದಂತೆ ಸ್ಥಳೀಯರು ಗರಂ ಆಗಿದ್ದಾರೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿ ಕ್ಯಾಂಟೀನ್‌ನ ಗೇಟ್‌ ತೆರವು ಮಾಡಲಾಗಿದೆ.  ಬಿಬಿಎಂಪಿ ವಿರುದ್ಧ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಇಂದಿರಾ ಕ್ಯಾಂಟೀನ್‌ ಗೇಟ್‌ ತೆರವು ಮಾಡಲಾಗಿದೆ. ರಾಜಕೀಯಕ್ಕಾಗಿ ಕ್ಯಾಂಟೀನ್‌ ತೆರವು ಮಾಡಲಾಗುತ್ತಿದೆ ಅಂತ ಆರೋಪಿಸಲಾಗಿದೆ. ಬಡವರ ಹಸಿವು ನೀಗಿಸಲು ಸಿದ್ದರಾಮಯ್ಯ ಸರ್ಕಾರ ಇಂದಿರಾ ಕ್ಯಾಂಟೀನ್‌ ಆರಂಭಿಸಿತ್ತು.  ಬೆಂಗಳೂರಿನ ಎಲ್ಲ ವಾರ್ಡ್‌ಗಳಲ್ಲಿಯೂ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಗಿತ್ತು. ಕ್ಯಾಂಟೀನ್‌ ನಿಲ್ಲಿಸಿವಂತೆ ರಾಜ್ಯ ಸರ್ಕಾರದಲ್ಲಿ ತೀವ್ರ ಚರ್ಚೆ ನಡೆದಿದೆ. ಬಿಜೆಪಿ ಸರ್ಕಾರದಲ್ಲೇ ಕ್ಯಾಂಟೀನ್‌ ತರವಿಗೆ ಪರ- ವಿರೋಧ ಚರ್ಚೆ ಆರಂಭವಾಗಿದೆ. 

ಕಡಬ ಸರಕಾರಿ ಶಾಲೆಯ ತರಗತಿಯಲ್ಲಿ ನಮಾಜ್ , ಶಿಕ್ಷಣಾಧಿಕಾರಿ ಭೇಟಿ ಬಳಿಕ ಸೌಹಾರ್ದಯುತವಾಗಿ ಬಗೆ ಹರಿದ ಸಮಸ್ಯೆ