Asianet Suvarna News Asianet Suvarna News

ಕೊಡಗು: ಕೂರ್ಗ್ ಹೆರಿಟೇಜ್ ಸೆಂಟರ್ ಯೋಜನೆಯಲ್ಲಿ ಅವ್ಯವಹಾರ, ಪೂರ್ಣಗೊಳ್ಳೊದ್ಯಾವಾಗ.?


- ನೆನೆಗುದಿಗೆ ಬಿದ್ದಿರುವ ಕೂರ್ಗ್ ಹೆರಿಟೇಜ್ ಸೆಂಟರ್ ಮಹತ್ವಾಕಾಂಕ್ಷಿ ಯೋಜನೆ 

- ಸರ್ಕಾರದ  ಯೋಜನೆ  ಕಟ್ಟಡ ಕಾಮಗಾರಿ ಯಲ್ಲಿ ಅವ್ಯವಹಾರದ ಆರೋಪ

- 1.75 ಕೋಟಿ ಯೋಜನೆಗೆ ಈಗಾಗಲೇ 2.68 ಕೋಟಿ ವೆಚ್ಚ, ಕೆಲಸ ಇನ್ನೂ ಅಪೂರ್ಣ!
 

ಕೊಡಗು (ಜೂ. 20): ಕೊಡವ ಮೂಲನಿವಾಸಿಗಳ ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಡಿಕೇರಿಯಲ್ಲಿ ಆರಂಭಿಸಿದ್ದ ಮಹತ್ವಾಕಾಂಕ್ಷೆಯ ಕೂರ್ಗ್ ಹೆರಿಟೇಜ್ ಸೆಂಟರ್ (Coorg Heritage Centre)  ಕಟ್ಟಡ. ದೇಶದಲ್ಲಿಯೇ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಕೊಡಗಿನ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ​ ಕನಸಿನ ಗೋಪುರವೊಂದನ್ನು ನಿರ್ಮಾಣ ಮಾಡಲಿಕ್ಕೆ ಸರ್ಕಾರ ಮುಂದಾಗಿತ್ತು. ಆದ್ರೆ, 10ಕ್ಕೂ ಹೆಚ್ಚು ವರ್ಷ ಕಳೆದರೂ ಈ ಹೆರಿಟೇಜ್ ನ ನಿರ್ಮಾಣ ಕಾರ್ಯ ಮುಗಿಯದೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ.

ಕೊಡಗು: ಕಾಡಾನೆ ಹಾವಳಿ ತಪ್ಪಿಸಲು ಆನೆಗಳಿಗೆ ರೇಡಿಯೋ ಕಾಲರ್

ಇಷ್ಟಕ್ಕೂ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಈ ರೀತಿ ಪಾಳು ಬೀಳಲು ಕಾರಣ ಏನು ಅಂತಾ ನೋಡೋದಾದ್ರೆ ನಮಗೆ ಕೇಳಿಬರೋದು ಕಾಮಗಾರಿಯ ಅವ್ಯವಹಾರ. ಕೊಡವ ಹೆರಿಟೇಜ್ ನಿರ್ಮಾಣದಲ್ಲಿ ಭಾರಿ ಅಕ್ರಮ ಆಗಿದೆಯಂತೆ. ಇದನ್ನ ಈ ಹಿಂದೆ ಖುದ್ದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹೇಳ್ತಿದ್ದರು. ಇನ್ನಾದರೂ ಸರ್ಕಾರ ಎಚ್ಚೆತ್ತು ಕಾಮಗಾರಿ ಸಂಪೂರ್ಣಗೊಳಿಸಲಿ ಅಂತ ನಾಗರಿಕರು ಆಗ್ರಹಿಸಿದ್ದಾರೆ.

1.75 ಕೋಟಿ ವೆಚ್ಚದಲ್ಲಿ ಪೂರ್ಣವಾಗಬೇಕಿದ್ದ ಈ ಕಾಮಗಾರಿಗೆ ಇದಾಗಲೇ 2.68 ಕೋಟಿಯಷ್ಟು ವೆಚ್ಚ ಮಾಡಲಾಗಿದೆ. ಆದ್ರೆ, ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿದರು ಇಲ್ಲಿ ಕಣ್ಣಿಗೆ ಕಾಣುವ ಯಾವುದೇ ಕೆಲಸ ಆಗಿಲ್ಲ! ಕೊಡಗಿನ ಸಂಸ್ಕೃತಿಯನ್ನ, ಕೊಡಗಿನ ಪ್ರಾಚೀನ ಪರಂಪರೆ ಬಿಂಬಿಸುವ ನಿಟ್ಟಿನಲ್ಲಿ ರೂಪಿಸಲಾದ ಯೋಜನೆ ನುಂಗಣ್ಣರ ಪಾಲಾಗಿದೆ. ಈ ಕಾಮಗಾರಿ ಅವ್ಯವಹಾರ ಸಂಬಂಧ ಇಂಜಿನಿಯರ  ಪುರುಷೋತ್ತಮ್ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಜನತೆ ಆಗ್ರಹಿಸುತ್ತಿದ್ದಾರೆ

3 ವರ್ಷವಾದರೂ ಈಡೇರದ ಭರವಸೆ, ಕೊಡಗಿಗೆ ಹೈಟೆಕ್ ಆಸ್ಪತ್ರೆ ಇನ್ನೂ ಮರೀಚಿಕೆ!

ಒಟ್ನಲ್ಲಿ, ದೇವ್ರು ಕೊಟ್ರು ಪೂಜಾರಿ ಕೊಟ್ಟಿಲ್ಲಾ ಎನ್ನುವಂತೆ, ಕೊಡಗಿನ ಸಂಸ್ಕೃತಿ ಬಿಂಬಿಸುವ ಯೋಜನೆ ಹೆಸ್ರಲ್ಲಿ ಈ ಇಂಜಿನಿಯರ್, ಗುತ್ತಿಗೆದಾರರು ಜಿಲ್ಲಾಡಳಿತವನ್ನ ದಿಕ್ಕು ತಪ್ಪಿಸಿದ್ದಾರೆ. ಇನ್ನಾದ್ರೂ ಈ ಯೋಜನೆ ಮುಗಿದು ಸಾರ್ವಜನಿಕರ ಉಪಯೋಗಕ್ಕೆ ಬರಬೇಕಿದೆ.
 

Video Top Stories