19 ಕಾರ್ಮಿಕರ ಸ್ವಾಗತಕ್ಕೆ ಬಂದಿದ್ದು ಒಬ್ಬಿಬ್ಬರಲ್ಲ, 300 ಜನ..!
ಕಾರ್ಮಿಕರನ್ನು ಕರೆತಂದ ಹೆಗ್ಗಳಿಕೆ ಗಿಟ್ಟಿಸಲು ಶಾಸಕರ ನಡುವೆಯೇ ಪೈಪೋಟಿ ಏರ್ಪಟ್ಟ ಘಟನೆ ನಡೆಸಿದೆ. ಅಮೀನ್‌ದೀವಿ ಹಡಗಿನಲ್ಲಿ ಮಂಗಳೂರಿಗೆ ಬಂದ ಕಾರ್ಮಿಕರನ್ನು ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಕಾಂಗ್ರೆಸ್ ಎಂಎಲ್‌ಸಿ ಐವಾನ್ ಡಿಸೋಜಾ ಪೈಪೋಟಿ ಮೇಲೆ ಸ್ವಾಗತಿಸಿದ್ದಾರೆ.
ಮಂಗಳೂರು(ಮೇ.28): ಲಕ್ಷದ್ವೀಪದಿಂದ ಬಂದ ಕಾರ್ಮಿಕರನ್ನು ಸ್ವಾಗತಿಸಲು ಮಂಗಳೂರಿಗೆ ಬಂದಿದ್ದು ಒಬ್ಬಿಬ್ಬರಲ್ಲ, ಮುನ್ನೂರಕ್ಕೂ ಅಧಿಕ ಮಂದಿ. ಒಬ್ಬರ ಮೇಲೊಬ್ಬರು ಬಿದ್ದು ಕಾರ್ಮಿಕರಿಗೆ ಹೂ ಕೊಟ್ಟು ಬರಮಾಡಿಕೊಳ್ಳಲಾಯಿತು.
ಕಾರ್ಮಿಕರನ್ನು ಕರೆತಂದ ಹೆಗ್ಗಳಿಕೆ ಗಿಟ್ಟಿಸಲು ಶಾಸಕರ ನಡುವೆಯೇ ಪೈಪೋಟಿ ಏರ್ಪಟ್ಟ ಘಟನೆ ನಡೆಸಿದೆ. ಅಮೀನ್‌ದೀವಿ ಹಡಗಿನಲ್ಲಿ ಮಂಗಳೂರಿಗೆ ಬಂದ ಕಾರ್ಮಿಕರನ್ನು ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಕಾಂಗ್ರೆಸ್ ಎಂಎಲ್‌ಸಿ ಐವಾನ್ ಡಿಸೋಜಾ ಪೈಪೋಟಿ ಮೇಲೆ ಸ್ವಾಗತಿಸಿದ್ದಾರೆ.
ಜೂನ್ 1 ರ ನಂತರ ಬಾರ್-ರೆಸ್ಟೊರೆಂಟ್, ಜಿಮ್ ಕತೆ ಏನು?
ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ 19 ಕಾರ್ಮಿಕರನ್ನು ಸ್ವಾಗತಿಸಲು ಮುನ್ನೂರು ಜನ ಬೇಕಾ ಎನ್ನುವ ಪ್ರಶ್ನೆ ಎದ್ದಿದೆ. ಏನ್ ಮಾಡೋದು ಹೇಳಿ ಎಲ್ಲಾ ಕ್ರೆಡಿಟ್ ಪಾಲಿಟಿಕ್ಸ್. ಕಾರ್ಮಿಕರಿಗೆ ಬದುಕಿನ ಚಿಂತೆ, ರಾಜಕಾರಣಿಗಳಿಗೆ ಮತ್ತೊಂದು ಚಿಂತೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ