Asianet Suvarna News Asianet Suvarna News

ಬಿಗ್‌ 3 ಇಂಪ್ಯಾಕ್ಟ್‌: ಕಲಬುರಗಿ ಡೇಂಜರ್‌ ಟ್ಯಾಂಕ್‌, ಜನರ ಸಂಕಷ್ಟಕ್ಕೆ ಸಿಕ್ತು ಮುಕ್ತಿ..!

ಬಿಗ್‌ 3 ವರದಿ ಪ್ರಸಾರದ ಬಳಿಕ ಎಚ್ಚೆತ್ತ ಮಹಾನಗರ ಪಾಲಿಕೆ| ಡೇಂಜರ್‌ ಟ್ಯಾಂಕ್‌ನಲ್ಲಿ ನೀರು ಸಂಗ್ರಹ ಸ್ಥಗಿತ|ಜನರಿಗೆ ಬೈಪಾಸ್‌ ಮೂಲಕ ನೀರು ಸರಬರಾಜಿಗೆ ವ್ಯವಸ್ಥೆ|  

ಕಲಬುರಗಿ(ಫೆ.17): ಕಲಬುರಗಿಯ ಅಶೋಕನಗರದ ಹಳೆಯ ವಾಟರ್‌ ಟ್ಯಾಂಕ್‌ನ ಸಿಮೆಂಟ್ ಉದುರುತ್ತಿದೆ. ಟ್ಯಾಂಕ್ ಶಿಥಿಲಗೊಂಡಿದ್ದು, ಯಾವಾಗ ಬೇಕಾದರೂ ಬೀಳಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಫೆ. 15 ರಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಿಗ್‌ 3 ಕಾರ್ಯಕ್ರಮದಲ್ಲಿ ವರದಿ ಪ್ರಸಾರವಾಗಿತ್ತು. 

ಕಲಬುರ್ಗಿ: BIG 3 ವರದಿ ಬಳಿಕ ಡೇಂಜರಸ್ ವಾಟರ್ ಟ್ಯಾಂಕ್‌ನಲ್ಲಿ ನೀರು ಸಂಗ್ರಹ ಸ್ಥಗಿತ

ವರದಿ ಪ್ರಸಾರದ ಬಳಿಕ ಎಚ್ಚೆತ್ತ ಮಹಾನಗರ ಪಾಲಿಕೆಯ ಎಕ್ಸಿಕ್ಯೂಟಿವ್‌ ಇಂಜಿನೀಯರ್ ನರಸಿಂಹ ರೆಡ್ಡಿ ಸ್ಥಳಕ್ಕೆ ಆಗಮಿಸಿದ್ದು ನಾಳೆಯಿಂದ ಡೇಂಜರ್‌ ಟ್ಯಾಂಕ್‌ನಲ್ಲಿ ನೀರು ಸಂಗ್ರಹ ಸ್ಥಗಿತ ಮಾಡಲಾಗುವುದು ಜೊತೆಗೆ ಜನರಿಗೆ ಬೈಪಾಸ್‌ ಮೂಲಕ ನೀರು ಸರಬರಾಜಿಗೆ ವ್ಯವಸ್ಥೆ ಮಾಡಲಾಗಿದೆ. ಟ್ಯಾಂಕ್‌ ಸುತ್ತ ಜನರು ಸಂಚರಿಸದಂತೆ ತಂತಿ ಬೇಲಿ ಹಾಕುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. 

ಬೀಳುವ ಸ್ಥಿತಿಯಲ್ಲಿದೆ ವಾಟರ್ ಟ್ಯಾಂಕ್, ಸಂಬಂಧಪಟ್ಟವರು, ಜನಪ್ರತಿನಿಧಿಗಳು ಮಾತ್ರ ಡೋಂಟ್ ಕೇರ್